ಕಾಳಿಕಾಂಬ ದೇವಾಲಯದಲ್ಲಿ ಶಿವರಾತ್ರಿ

shivaratri
Published on

ಮಡಿಕೇರಿ:

ಹೆಬ್ಬಾಲೆ ಗ್ರಾಮದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ಶ್ರೀ ಕಾಳಿಕಾಂಬ ಅಮ್ಮನವರ ಉತ್ಸವ ನಡೆಯಿತು. ಸಮುದಾಯದ ಗುರುಗಳಾದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಬೆಳಗಿನ ಜಾವ ಗಣಪತಿ ಪೂಜೆ, ಕಾಳಿಕಾಂಬ ಅಭಿಷೇಕ, ಪೂಜೆ ಪ್ರಸಾದ ವಿನಿಯೋಗ ನಡೆಯಿತು.

ದೇವಿ ಮಹಾತ್ಮೆ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಊರಿನ ಎಲ್ಲಾ ಬಡಾವಣೆಗಳಲ್ಲೂ ಅಮ್ಮನವರ ಉತ್ಸವ ಕಾರ್ಯಕ್ರಮವನ್ನು ಮುಂಜಾನೆ ತನಕ ನಡೆಸಲಾಯಿತು. ಪ್ರಧಾನ ಅರ್ಚಕ ನಂಜುAಡ ಆಚಾರ್ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸದಾಶಿವ, ಕಾರ್ಯದರ್ಶಿ ಲೋಕನಾಥ ಆಚಾರ್, ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಂದರ್ಭ ಅನ್ನಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net