ಚಿಕ್ಕಂಕನಹಳ್ಳಿಗೆ ಭಕ್ತರ ದಂಡು: ನಂದಿಬಸವೇಶ್ವರನಿಗೆ ವಿಶೇಷ ಪೂಜೆ

19_02_Mdy_02(Shivarathri)
Published on

ಮದ್ದೂರು: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ಐತಿಹಾಸಿಕ ಚಿಕ್ಕಂಕನಹಳ್ಳಿ ನಂದಿಬಸವೇಶ್ವರಸ್ವಾಮಿ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಶನಿವಾರ ದಿನಪೂರ್ತಿ ಧಾರ್ಮಿಕ ಕೈಂಕರ್ಯ ನಡೆದಿತ್ತು. ಅಂತೆಯೇ ಮರುದಿನ ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿದರು. ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ನಂದಿ ಬಸವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು. ಕೆಲವರು ತುಪ್ಪದ ಕಜ್ಜಾಯವನ್ನು ಅರ್ಪಿಸಿದರು. ಅರ್ಚಕ ಜೆ.ಎಂ.ಕಲ್ಲೇಶ್‌ಕುಮಾರ್ ಅವರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯ ನಡೆಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಇನ್ನು ಹಬ್ಬದ ಅಂಗವಾಗಿ ಚಿಕ್ಕಂಕನಹಳ್ಳಿ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮದವರ ಸಹಕಾರೊಂದಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಭಕ್ತರಿಗೆ ಬೂಂದಿ ಮತ್ತು ಪಾಯಸ, ಅನ್ನ ಸಾಂಬಾರ್ ನೀಡಲಾಯಿತು. ಆಯೋಜಕರು ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದರು. ದಶವಾರ ಗ್ರಾಮದವರಿಂದ ಜಾಗರಣೆ ಭಜನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net