ಶಿವರಾತ್ರಿಗೆ ಸ್ವರ್ಣ ಬಣ್ಣದೊಂದಿಗೆ ಕುದ್ರೋಳಿ ಕ್ಷೇತ್ರ ಸಜ್ಜು

kudroli new
Published on

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸಂಪೂರ್ಣ ಸ್ವರ್ಣ ಬಣ್ಣದೊಂದಿಗೆ ಕಂಗೊಳಿಸಿ, ಶಿವರಾತ್ರಿ ಆಚರಣೆಗೆ ಸಜ್ಜಾಗಿದೆ.

ಕಳೆದ ನವರಾತ್ರಿ ಉತ್ಸವ ಸಂದರ್ಭ ಆರಂಭಿಸಲಾಗಿದ್ದ ದೇವಾಲಯವನ್ನು ಸಂಪೂರ್ಣ ಸ್ವರ್ಣ ಬಣ್ಣದಲ್ಲಿ ಅಲಂಕರಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಕ್ಷೇತ್ರದ ನವೀಕರಣ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಬುಧವಾರ ತಿಳಿಸಿದರು.

ದೇವಸ್ಥಾನದ ಧ್ವಜಸ್ತಂಭ ಕೂಡ ಸ್ವರ್ಣ ಬಣ್ಣ ಹೊಂದಿರುವುದು ಕುದ್ರೋಳಿ ಕ್ಷೇತ್ರದ ವಿಶೇಷ. ಈ ಬಾರಿ ಶಿವರಾತ್ರಿ ಉತ್ಸವ ಸಂದರ್ಭ ದೇವಸ್ಥಾನದ ಪರಿವಾರ ದೇವರುಗಳ ಮಂದಿರಗಳನ್ನು ಕೂಡ ಸ್ವರ್ಣ ಬಣ್ಣದಿಂದ ಸುಂದರಗೊಳಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಶಬರಿಮಲೆಯಲ್ಲಿ ಅಯ್ಯಪ್ಪನ ಮಂದಿರ, ಅಮೃತಸರದಲ್ಲಿ ಗುರುನಾನಕ್ ಮಂದಿರ ಗೋಲ್ಡನ್ ಟೆಂಪಲ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದೆ. ಚೆನ್ನೈನಲ್ಲಿ ಸ್ವಾಮೀಜಿಯೊಬ್ಬರು ನೀರಿನ ಮಧ್ಯದಲ್ಲಿ ಸ್ವರ್ಣ ಮಂದಿರ ನಿರ್ಮಿಸಿದ್ದಾರೆ. ಅಲ್ಲಿಗೆ ಭೇಟಿ ನೀಡಿದ್ದೆ. ಅದರಂತೆ ಕುದ್ರೋಳಿ ಕ್ಷೇತ್ರ ಕೂಡ ಸ್ವರ್ಣ ಬಣ್ಣದಿಂದ ಭಕ್ತರ ಕಣ್ಮನ ಸೆಳೆಯಲಿದೆ ಎಂದರು. ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಸದಸ್ಯರಾದ ರವಿಶಂಕರ್ ಮಿಜಾರ್, ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಡಾ.ಬಿ.ಜಿ.ಸುವರ್ಣ, ಪ್ರಮುಖರಾದ ಡಾ.ಅನಸೂಯ ಸಾಲ್ಯಾನ್, ಚಿತ್ತರಂಜನ್ ಗರೋಡಿ, ಶೇಖರ ಪೂಜಾರಿ, ದೇವೇಂದ್ರ ಪೂಜಾರಿ, ಕರುಣಾಕರ ಶೆಟ್ಟಿ , ಎಸ್.ಜಯವಿಕ್ರಮ್, ಮೋಹನ್ ಶೆಟ್ಟಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಕ್ಷೇತ್ರದಲ್ಲಿ ಶಿವರಾತ್ರಿ ಉತ್ಸವದ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಫೆ.23ರವರೆಗೆ ವಿವಿಧ ಕಾರ್ಯಕ್ರಮಗಳಿವೆ. 21ರಂದು ರಾತ್ರಿ 1ಕ್ಕೆ ಮಹಾಶಿವರಾತ್ರಿ ಜಾಗರಣೆ ಬಲಿ ನಡೆಯಲಿದೆ. 22ರಂದು ಮಧ್ಯಾಹ್ನ 1ಕ್ಕೆ ಮಹಾ ಅನ್ನ ಸಂತರ್ಪಣೆ ಇರಲಿದೆ. ಪದ್ಮರಾಜ್ ಆರ್. ಕೋಶಾಧಿಕಾರಿ, ಕ್ಷೇತ್ರಾಡಳಿತ ಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net