ಶಿವರಾಮ ಕಾರಂತರ ಸ್ಮೃತಿ ದಿನಾಚರಣೆ

smrithi
Published on

ಕೋಟ: ಡಾ.ಕೋಟ ಶಿವರಾಮ ಕಾರಂತ ರಿಸರ್ಚ್, ಸ್ಟಡಿ ಸೆಂಟರ್ ಟ್ರಸ್ಟ್, ಕಾರ್ಕಡ ಸಾಲಿಗ್ರಾಮ ಗೆಳೆಯರ ಬಳಗ ಆಶ್ರಯದಲ್ಲಿ ಸಾಲಿಗ್ರಾಮದ ಮಾನಸ ಚಿತ್ರಶಾಲೆಯಲ್ಲಿ ಡಾ.ಕೋಟ ಶಿವರಾಮ ಕಾರಂತರ 27ನೇ ಸ್ಮತಿ ದಿನ ಆಚರಿಸಲಾಯಿತು.

ಬ್ಯಾಂಕ್ ನಿವೃತ್ತ ಅಧಿಕಾರಿ ಕೆ.ಸೀತಾರಾಮ ಸೋಮಯಾಜಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಬಿ.ಎಂ.ಗುರುರಾಜ ರಾವ್, ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಪಂಜು ಪೂಜಾರಿ, ಉದ್ಯಮಿ ಸಂದೀಪ್ ಶೆಟ್ಟಿ, ಕೆ.ಜಗದೀಶ ಆಚಾರ್ಯ, ಕೆ.ರಘು ಭಂಡಾರಿ, ಕೆ.ಶ್ರೀಪತಿ ಆಚಾರ್ಯ, ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಸುಧಾಕರ ಪಿ, ಸಾಲಿಗ್ರಾಮ ಪಪಂ ಸದಸ್ಯ ಕೆ.ಸಂಜೀವ ದೇವಾಡಿಗ, ಸಿಬ್ಬಂದಿ ಸಂಗೀತಾ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net