ಅಪ್ಪು ಅಗಲಿ ತಿಂಗಳು ಕಳೆದರೂ ಬತ್ತಿಲ್ಲ ಶಿವರಾಜಕುಮಾರ್ ಕಣ್ಣೀರು...

ಪುನೀತ್ ನೆನೆದು ಕಣ್ಣೀರಿಟ್ಟ ಶಿವರಾಜ್ ಕುಮಾರ್.. #PuneethRajkumar #SriMurali #Shivrajkumar - youtube
Published on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾಗಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದೆ. ಅವರು ನಿಧನರಾಗಿದ್ದು ಅಕ್ಟೋಬರ್ 29ರಂದು. ಆದರೆ ಅವರ ಕುಟುಂಬದವರಾಗಲಿ, ಅಭಿಮಾನಿಗಳಾಗಲಿ, ಅಷ್ಟೇ ಏಕೆ, ರಾಜ್ಯದ ಜನಸಾಮಾನ್ಯರು ಕೂಡ ಅಪ್ಪುವನ್ನು ಮರೆಯಲು ಸಾಧ್ಯವಾಗಿಲ್ಲ ಎಂಬುದಕ್ಕೆ ಇಂದು ನಗರದಲ್ಲಿ ನಡೆದ ಸಮಾರಂಭವೊಂದು ಸಾಕ್ಷಿಯಾಯಿತು.

ರಾಜ್ಯ ಆರ್ಯ ಈಡಿಗರ ಸಂಘದವರು ಅಪ್ಪು ನಮನ ಕಾರ್ಯಕ್ರಮವನ್ನು ಇಂದು ಏರ್ಪಡಿಸಿದ್ದರು. ಅದರಲ್ಲಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಲ್ಲದೆ, ಶಿವರಾಜಕುಮಾರ್, ಶ್ರೀಮುರಳಿ, ವಿಜಯ ರಾಘವೇಂದ್ರ, ಜಯಮಾಲಾ ಮುಂತಾದವರೂ ಭಾಗವಹಿಸಿದ್ದರು. ಅಲ್ಲಿ ಶ್ರೀಮುರಳಿ ಮತ್ತು ವಿಜಯರಾಘವೇಂದ್ರ ಅವರು ತಮ್ಮ ಮಾಮ ಅಪ್ಪುಗಾಗಿ ಫೇವರಿಟ್ ಸಾಂಗ್ ‘ಬೊಂಬೆ ಹೇಳುತೈತೆ’ ಹಾಡು ಹಾಡಿದರು.

ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದವರಿಗೆಲ್ಲ ಅಪ್ಪು ಅವರೇ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತಿತ್ತು. ಅದರಲ್ಲೂ ಅವರ ಕುಟುಂಬದವರಿಗೆ ಕೇಳಬೇಕೇ? ಸಭಿಕರ ಮೊದಲ ಸಾಲಿನಲ್ಲೇ ಕುಳಿತಿದ್ದ ಶಿವರಾಜಕುಮಾರ್ ಅವರಂತೂ ತಮ್ಮ ಪ್ರೀತಿಯ ಸೋದರ ಪುನೀತ್‌ ಅವರನ್ನು ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಅತ್ತರು. ಈ ದೃಶ್ಯ ಇತರರ ಕಣ್ಣಲ್ಲಿಯೂ ನೀರು ತರಿಸಿತು. ಅಪ್ಪು ನಿಧನರಾಗಿ ತಿಂಗಳಾದರೂ ಅವರನ್ನು ಮರೆಯಲು ಯಾರಿಗೂ ಆಗುತ್ತಿಲ್ಲ ಎಂಬುದಕ್ಕೆ ಈ ಘಟನೆ ನಿದರ್ಶನವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net