ಶಿವಪುರದಲ್ಲಿ ಭೀಮಹಬ್ಬ ಆಚರಣೆ

26raju4
Published on

ಚಾಮರಾಜನಗರ: ತಾಲೂಕಿನ ಶಿವಪುರ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಭಾನುವಾರ ಭೀಮಹಬ್ಬ-2023 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಳಂದ ಬೌದ್ಧ ವಿಶ್ವವಿದ್ಯಾಲಯದ ಕಾರ್ಯದರ್ಶಿ ಬಂತೇ ಬೋಧಿದತ್ತ ತೇರ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬೌದ್ಧ ಸಂಘವು 1954ರಲ್ಲಿ ಬೋಧಿಸತ್ವ ಬಿರುದು ನೀಡಿದೆ. ಭಗವಾನ್ ಬುದ್ಧರನ್ನು ಬಿಟ್ಟರೆ ಬೋಧಿಸತ್ವ ಎಂದು ಕರೆಸಿಕೊಂಡದವರು ಅಂಬೇಡ್ಕರ್ ಅವರೊಬ್ಬರೇ ಎಂದು ಬಣ್ಣಿಸಿದರು.

ಕನಿಷ್ಠ ವೇತನ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್, ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಎ.ಎಂ.ಪ್ರಸಾದ್‌ಮೂರ್ತಿ, ಮೈಸೂರು ಮಹಾರಾಜ ಕಾಲೇಜು ಪ್ರಾಧ್ಯಾಪಕ ಯೋಗೇಶ್, ವಕೀಲರಾದ ಪ್ರಸನ್ನಕುಮಾರ್, ರಾಮಸಮುದ್ರ ಪುಟ್ಟಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net