ಶಿವಪುರದಲ್ಲಿ ಮಾಸ್ಕ್, ಸ್ಯಾನಿಟೈಸರ್ ಉಚಿತ ವಿತರಣೆ

HLK SHIVAPURA 09
Published on

ಹೊಳಲ್ಕೆರೆ: ಜಗತ್ತನ್ನು ಕಾಡುತ್ತಿರುವ ಕರೊನಾ ಮಹಾಮಾರಿ ಹರಡದಂತೆ ತಡೆಯಲು ಸ್ವಯಂ ಜಾಗೃತಿ ಹೊರತು ಸದ್ಯಕ್ಕೆ ಅನ್ಯ ಮಾರ್ಗವಿಲ್ಲ ಎಂದು ಮಾಜಿ ಶಾಸಕ ಪಿ.ರಮೇಶ್ ಅಭಿಪ್ರಾಯಪಟ್ಟರು.

ಆದರ್ಶ ಸಮಾಜ ಕಾರ್ಯ ಸಂಸ್ಥೆ, ಸಮೂಹ ಶಕ್ತಿ ಬಳಗ ಸಹಯೋಗದಲ್ಲಿ ಶಿವಪುರ ಗ್ರಾಮದ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮಸ್ಥರಿಗೆ ಮಾಸ್ಕ್, ಸ್ಯಾನಿಟೈಸರ್ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವದಲ್ಲಿ ಕರೊನಾ ವಿರುದ್ಧ ಯುದ್ಧ ಘೋಷಣೆ ಆಗಿದ್ದು, ಇದರಲ್ಲಿ ವಿಜಯ ಸಾಧಿಸಲು ಪ್ರತಿ ನಾಗರಿಕ ಸ್ವಯಂ ಸೈನಿಕನಂತೆ ತನ್ನ ಹೊಣೆಗಾರಿಕೆ ನಿರ್ವಹಿಸಬೇಕು. ಪರಸ್ಪರ ಅಂತರ, ಮಾಸ್ಕ್, ಸ್ಯಾನಿಸೈನ್ ಬಳಕೆ ಸೇರಿ ಸರ್ಕಾರಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಯುದ್ಧದಲ್ಲಿ ಜಯ ಖಚಿತ ಎಂದರು.

ಸಮೂಹ ಶಕ್ತಿ ಬಳಗದ ಗ್ರಾಮ ಶಾಖೆ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಮಹಾಮಾರಿಗೆ ತಡೆ ಹಾಕಲು ಪ್ರತಿ ವ್ಯಕ್ತಿ, ಕುಟುಂಬ, ಬಡಾವಣೆ, ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ ಹೀಗೆ ಪ್ರತಿ ಹಂತದಲ್ಲೂ ಜಾಗೃತಿ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮ ಬಳಿಕ ಗ್ರಾಮದ ಪ್ರತಿ ಮನೆಗೆ ತೆರಳಿ ಅಂದಾಜು ಸಾವಿರಕ್ಕೂ ಹೆಚ್ಚು ಮಂದಿಗೆ ಮಾಸ್ಕ್, ಸ್ಯಾನಿಟೈಸನ್ ಉಚಿತವಾಗಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net