ಧನುಷ್ಕೋಟಿಗೆ ಉತ್ತಮ ಸಂಪರ್ಕ ರಸ್ತೆ, ಅದರ ಸುತ್ತ ವಾಕ್‌ವೇ ಅಭಿವೃದ್ಧಿ, ಪಾರ್ಕಿಂಗ್ ಸ್ಥಳ, ಕುಡಿಯುವ ನೀರು ಮತ್ತು ಶೌಚಗೃಹ, ಲ್ಯಾಂಡ್‌ಸ್ಕೇಪಿಂಗ್, ಕಲ್ಯಾಣಿಗಳು ಮತ್ತು ಮಂಟಪಗಳ ಸ್ವಚ್ಛತೆ, ರಾಯಗೋಪುರ ಮೆಟ್ಟಿಲುಗಳ ಮರು ನಿರ್ಮಾಣ, ವಿದ್ಯುದೀಕರಣ, ಗೇಟುಗಳು ಮತ್ತು ಪಾರ್ಕ್ ನಿರ್ಮಾಣ ಸೇರಿದಂತೆ ಹತ್ತಾರು ಕಾಮಗಾರಿಗಳಿಗೆ ೨೨.೭೦ ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಪ್ರವಾಸೋದ್ಯಮ, ಮುಜರಾಯಿ, ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಅರಣ್ಯ, ಲೋಕೋಪಯೋಗಿ, ಕೆಆರ್‌ಐಡಿಎಲ್ ಮೂಲಕ ಕಾಮಗಾರಿಗಳನ್ನು ನಿರ್ವಹಿಸಲುದ್ದೇಶಿಸಲಾಗಿದೆ ಎಂದು ವಿವರಿಸಿದರು.