ಮಾಸ್ಟರ್ಸ್ ಅಥ್ಲೆಟಿಕ್ಸ್ ಗೆ ಶಿವಪ್ಪ ಸಲಕಿ ಆಯ್ಕೆ

12 Dwd 7 Shivappa Salaki
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವೀಡನ್‌ನ ಗೋಥೇನ್‌ಬರ್ಗ್ನಲ್ಲಿ ಆಯೋಜಿಸಿರುವ 25ನೇ ಜಾಗತಿಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಗೆ ತಾಲೂಕಿನ ಮರೇವಾಡ ಗ್ರಾಮದ ಹಿರಿಯ ಕ್ರೀಡಾಪಟು ಶಿವಪ್ಪ ಮಹಾಂತಪ್ಪ ಸಲಕಿ ಆಯ್ಕೆಯಾಗಿದ್ದಾರೆ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಫ್ ಧಾರವಾಡ ಡಿಸ್ಟಿçಕ್ಟ್ ಸದಸ್ಯರಾಗಿರುವ ಶಿವಪ್ಪ ಸಲಕಿ, 75ರಿಂದ 79 ವಯೋಮಾನದ ಓಟದಲ್ಲಿ ಭಾರತವನ್ನು ಪ್ರತಿನಿಽಸಲಿದ್ದಾರೆ. ಈಗಾಗಲೇ ಹಲವು ದೇಶಗಳಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿರುವ ಶಿವಪ್ಪ, ಹತ್ತಾರು ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ಆ. 13ರಿಂದ 25ರವರೆಗೆ ನಡೆಯುವ ಮಾಸ್ಟರ್ಸ್ ಅಥ್ಲೆಟಿಕ್ಸ್ಗೆ ತೆರಳಿರುವ ಶಿವಪ್ಪ ಅವರಿಗೆ ಅಸೋಸಿಯೇಷನ್ ಪದಾಽಕಾರಿಗಳು ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net