ಸತ್ತು ಬದುಕಿದ ನವಲಗುಂದದ ಶಿವಪ್ಪ

SHIVAPPA
Published on

ನವಲಗುಂದ: ಸ್ಥಳೀಯ ಸಿದ್ದಾಪುರ ಓಣಿ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆಂದು ವೈದ್ಯರು ಘೊಷಿಸಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಮನೆಗೆ ಒಯ್ಯುತ್ತಿರುವಾಗ ಮತ್ತೆ ಉಸಿರಾಟ ಆರಂಭಿಸಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಶಿವಪ್ಪ ಮಲ್ಲಪ್ಪ ತೋಟದ (56) ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ಮೂಲಕ ಉಸಿರಾಟ ನಡೆಸುತ್ತಿದ್ದ ಶಿವಪ್ಪ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರಿಂದ ಮನೆಯವರು ಮೃತದೇಹವನ್ನು ನವಲಗುಂದಕ್ಕೆ ಕರೆತರುತ್ತಿದ್ದರು. ಈ ವೇಳೆ ಶಿವಪ್ಪ ಉಸಿರಾಟ ಆರಂಭಿಸುತ್ತಿರುವುದು ಕಂಡು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತು. ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ಕರೆತಂದಾಗ ಶಿವಪ್ಪನ ಉಸಿರು ಇನ್ನೂ ಇದೆ. ಪಲ್ಸ್ ರೇಟ್ ಕಡಿಮೆ ಇರುವುದರಿಂದ ಬದುಕುಳಿಯುವುದು ಕಷ್ಟಸಾಧ್ಯ ಎಂದು ತಿಳಿಸಿ ಮನೆಗೊಯ್ಯುವಂತೆ ತಿಳಿಸಿದ್ದರು. ಆದರೆ, ಶಿವಪ್ಪನ ಸಹೋದರ ಶಂಕ್ರಪ್ಪ ಮತ್ತೊಂದು ವೈದ್ಯರ ಮೊರೆ ಹೋಗಿದ್ದಾನೆ. ಆಗ ವೈದ್ಯರು ಅಗತ್ಯ ಚಿಕಿತ್ಸೆ ನೀಡಿ ಸಲಾಯಿನ್ ಹಚ್ಚಿದ್ದಾರೆ. ಸೋಮವಾರ ರಾತ್ರಿಯಿಂದ ಬುಧವಾರ ಸಂಜೆಯವರೆಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಶಿವಪ್ಪನ ಅದೃಷ್ಟವೆಂಬಂತೆ ಸತ್ತು ಹೋದವ ಮತ್ತೆ ವೈದ್ಯಕೀಯ ಉಪಚಾರದೊಂದಿಗೆ ಬದುಕುಳಿದಿರುವುದು ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net