

ಉಡುಪಿ: ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಿವರಾತ್ರಿ ಪ್ರಯುಕ್ತ ದೇವಳದ ಅಭಿವೃದ್ಧಿ ಟ್ರಸ್ಟ್ ಹಾಗು ಶಿವಪಾಡಿ ವೈಭವ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಯಕ್ಷಗಾನ, ಕೃಷಿ, ಆರೋಗ್ಯ, ಆಹಾರ ಮೇಳದ ಶಿವಪಾಡಿ ವೈಭವ ಎಂಬ ವಿನೂತನ ಕಾರ್ಯಕ್ರಮ ಜನಮನ ಸೂರೆಗೊಂಡಿದೆ.
250ಕ್ಕೂ ಹೆಚ್ಚು ಕೃಷಿ, ಖಾದ್ಯ ಮಳಿಗೆಗಳನ್ನು ತೆರೆಯಲಾಗಿದ್ದು, ದೇವಾಲಯದ ಸುತ್ತಲಿನ ವಿಶಾಲ ಜಾಗದಲ್ಲಿ ಕೈಮಗ್ಗ ಸೀರೆಗಳು, ವಿವಿಧ ಖಾದಿ ದಿರಿಸುಗಳು, ಕೃಷಿ ಸಲಕರಣೆಗಳು, ಮಣ್ಣಿನ ಪರಿಕರಗಳು, ವಿವಿಧ ಇಲಾಖೆಗಳ ಮಳಿಗಳು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿವೆ. ಉಡುಪಿ ಹ್ಯಾಂಡ್ಲೂಮ್ ವಲ್ಡ್, ಉಡುಪಿ ಸಂಸತಿಯ ಕೈಮಗ್ಗ ನೇಕಾರಿಕೆ ಪ್ರಾತ್ಯಕ್ಷಿಕೆ ಗಮನ ಸೆಳೆಯುತ್ತಿದೆ. ಕೋಣಗಳ ಸಹಾಯದಿಂದ ಗಾಣದ ಮೂಲಕ ಕಬ್ಬಿಣ ಹಾಲು ಹಿಂಡಿ ಸ್ಥಳದಲ್ಲೇ ವಿತರಿಸುವ ಆಲೆಮನೆ ಜನಾಕರ್ಷಕವಾಗಿದೆ. ಕಣ್ಮರೆಯಾಗುತ್ತಿರುವ ಕೃಷಿ ಪರಿಕರಗಳಾದ ಅಡಿಕೆ ಹಾಕುವ ಪಾತ್ರೆ, ಕಡೆಗೋಲು, ಹಿಟ್ಟು ಕಲಸುವ ಪಾತ್ರೆ, ಬೀಸುಕಲ್ಲು, ಕಳಸಿಗೆ, ಶಾವಿಗೆ, ಅಚ್ಚು, ಕೊಳಂಬೆ, ನೊಗ, ಸೇರು ಒನಕೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಭಟ್ ಆ್ಯಂಡ್ ಭಟ್ ಖ್ಯಾತಿಯ ಯೂಟ್ಯೂಬರ್ ಸುದರ್ಶನ ಭಟ್ ಅವರ ಸಾವಯವ ಮನೆ ಅಡುಗೆಯ ಉತ್ಪನ್ನಗಳ ಮಳಿಗೆ ಜನಾಕರ್ಷಣೆಯ ಕೇಂದ್ರವಾಗಿದೆ. ಜೊತೆಗೆ ಪಾನಿಪುರಿ, ಚರುಮುರಿ, ಗೋಲಿಸೋಡಾ ಬಾಯಿರುಚಿ ತಣಿಸುತ್ತಿವೆ.
ಇಂದು ಸಮಾರೋಪ
ಶಿವಪಾಡಿ ಉತ್ಸವ ಸಮಾರೋಪ ಸಮಾರಂಭ ೆ.26ರಂದು ಸಾಯಂಕಾಲ 4 ಗಂಟೆಗೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕೃಷಿ ಮೇಳದಲ್ಲಿ ವ್ಯವಸಾಯದಲ್ಲಿ ಡ್ರೋನ್ ಮತ್ತು ರೋಬೋಟೆಕ್ಸ್ ಬಳಕೆ, ಸ್ಮಾರ್ಟ್ ಾರ್ಮಿಂಗ್ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಪಂಚಾಮೃತ ಅಭಿಷೇಕ, ಏಕವಿಂಶತ್ಯುತ್ತರಶತ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾರಂಗಪೂಜೆ ಜರಗಲಿದೆ.