ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಯಾಗ ಪ್ರಾರಂಭ

udp-22-atirudra 1
Published on

ಉಡುಪಿ: ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ 12 ದಿನ ನಡೆಯುವ ಅತಿರುದ್ರ ಮಹಾಯಾಗಕ್ಕೆ ಬುಧವಾರ ಋತ್ವಿಜರ ಪೂಜೆಯೊಂದಿಗೆ ಚಾಲನೆ ದೊರೆಯಿತು.

ಅತಿರುದ್ರ ಯಾಗಮಂಟಪದಲ್ಲಿ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ ಮತ್ತು ಶತಚಂಡಿಕಾ ಯಾಗಮಂಟಪದಲ್ಲಿ ಶತಚಂಡಿಕಾ ಯಾಗ ನಡೆಯಿತು. ದೇವಸ್ಥಾನದ ಪ್ರಾಂಗಣದಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥನೆ, ಅರಣೀ ಮಥನಪೂರ್ವಕ ಅಗ್ನಿ ಜನನ, ಸಪರಿವಾರ ಉಮಾಮಹೇಶ್ವರ ದೇವರಿಗೆ ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ, ಸಾಯಂಕಾಲ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ, ಶಾಸಕ ರಘುಪತಿ ಭಟ್, ಶಿವಪಾಡಿ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್, ಮಾಜಿ ಶಾಸಕ ದಯಾನಂದ ರೆಡ್ಡಿ, ಉದ್ಯಮಿ ಡಾ. ಜಿ. ಶಂಕರ್, ನಟ ರಕ್ಷಿತ್ ಶೆಟ್ಟಿ ಮತ್ತು ಕುಂದಾಪುರ ಗುತ್ತಿಗೆದಾರ ಕಾರ್ತಿಕ್ ಆರ್. ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net