ಕಳಸಾಪೂರ ಗ್ರಾಮದಲ್ಲಿ ಶಿವಾನುಭ ಕಾರ್ಯಕ್ರಮ

08GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಸೋಮವಾರ 1506ನೇ ಶಿವಾನುಭವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿವಾನುಭವ ಅಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ, ಅರಿವಿಲ್ಲದ ಆಚಾರದಿಂದ ಸುಖವಿಲ್ಲ. ಯಾವ ಬೆಳವಣಿಗೆಯೂ ಇಲ್ಲ. ಅಕ್ಕಿಯೇ ಇಲ್ಲದ ಬರಿ ಭತ್ತದ ಹೊಟ್ಟನ್ನು ಬಿತ್ತಿ ಬೆಳೆಯುವಂತೆ ಅರಿವಿಲ್ಲದ ಆಚಾರದಿಂದ ಜ್ಞಾನ ಸಿಗುವುದಿಲ್ಲ. ಸತ್ವಯುತ ಅಕ್ಕಿ ಬೆಳೆಯಲು ಹೊರಟ ಒಕ್ಕಲಿಗ ಸಿಪ್ಪೆಯ ಕವಚ ಹೊಂದಿರುವ ಭತ್ತವನ್ನು ಬಿತ್ತಿದಾಗ ಮಾತ್ರ ಉತ್ತಮ ರೀತಿಯ ಬೆಳೆ ಪಡೆದು ಅದರಿಂದ ಅಕ್ಕಿ ಬೇರ್ಪಡಿಸಲು ಸಾಧ್ಯ. ಅದರಂತೆಯೇ ಧರ್ಮ ತತ್ವಗಳು ಅಕ್ಕಿಯ ಕಾಳಿನಂತಿದ್ದು ಆಚಾರ ರಾ ಕವಚದಲ್ಲಿರುತ್ತವೆ. ಇಂತಹ ಸತ್ವಯುಕ್ತ ತತ್ವಗಳನ್ನು ಬಿತ್ತಿದಾಗ ಮಾತ್ರ ಉತ್ತಮ ಆದರ್ಶವುಳ್ಳ ಜನಾಂಗ ತಯಾರಾಗಲು ಸಾಧ್ಯ ಎಂದರು.
ನಡೆ&ನುಡಿ ಒಂದಾದ ಸಿದ್ಧಾಂತದ ಮೇಲೆ ರೂಪುಗೊಂಡಿರುವ ನವಸಮಾಜದ ಜನರ ಆತ್ಮವಿಶ್ವಾಸ, ಸ್ವತಂತ್ರ ಪ್ರಜ್ಞೆ, ಪರಸ್ಪರ ಸೋದರ ಭಾವದೊಡನೆ ಸಮಾನತೆಯಿಂದ ಬಾಳಲು ಶರಣರು ಐದು ಅಮರ ಆಚಾರಗಳನ್ನು ರೂಢಿಯಲ್ಲಿ ತಂದಿದ್ದರು. ವ್ಯಕ್ತಿಯು ಆತ್ಮೋನ್ನತಿ. ಸಮಾಜದಲ್ಲಿ ಶಾಂತಿ, ರಾಷ್ಟ್ರದಲ್ಲಿ ಪ್ರಗತಿ ಸಾ-ಧಿಸಿ ಸರ್ವಹಿತ ಭಾವನೆ ಬೆಳೆಸಲು ಇಂದೂ ಸಹ ಪಂಚಾಚಾರ ತತ್ವಗಳು ಆಚರಿಸಲಾಗುತ್ತಿದೆ. ಶಿವಶರಣೆಯರ ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗೋಣ ಎಂದು ಜನತೆಗೆ ತಿಳಿಸಿದರು.
ನಿರ್ಮಲಾ ಕಮಡೊಳ್ಳಿ, ಅನಸೂಯಾ ಖಂಡಮ್ಮನವರ, ಜಯಶ್ರೀ, ಮಹಾದೇವ ಅಣ್ಣಿಗೇರಿ, ಸಂತೋಷ ನಾಯ್ಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net