ಕನ್ನಡ ಅನ್ನದ ಭಾಷೆ ಆಗಬೇಕು: ಡಾ. ತೋಂಟದ ಸಿದ್ಧರಾಮ ಶ್ರೀ

25GDG06
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶಂಭು ಬಳಿಗಾರ, . ಗು. ಸಿದ್ದಾಪೂರ ಅವರನ್ನು ಶಿವಾನುಭವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತೋಂಟದಾರ್ಯ ಶ್ರೀಗಳು, ಬಸಪ್ಪ ಪಲ್ಲೇದ, ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್​ ನಾಮಕರಣ ಮಾಡಿದ ಸಂದರ್ಭದಲ್ಲಿ 50 ವರ್ಷಗಳ ಹಿಂದೆ ಚೆನ್ನವಿರ ಕಣವಿಯವರು "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂದು ಸಾರಿದ್ದಾರೆ. ಕನ್ನಡದಲ್ಲಿಯೇ ಶಿಣ, ವ್ಯವಹಾರಗಳು ನಡೆಯಬೇಕು. ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಚನ್ನವಿರ ಕಣವಿಯವರು ಶ್ರೇಷ್ಠ ರಾಷ್ಟ್ರಕವಿಗಳು. ಅವರು ನಮ್ಮ ಗದಗಿನ ಮೂಲದವರು. ನಮ್ಮ ಕನ್ನಡ ಉಸಿರಾಗಬೇಕಾದರೆ ನಾವು ಮಾತನಾಡುವ ಎಲ್ಲವೂ ಕನ್ನಡಮಯವಾಗಬೇಕು. ಜಾನಪದ ಸಾಹಿತ್ಯ ಅತ್ಯಂತ ಶಕ್ತಿಶಾಲಿ ಆಗಿರುವಂತಹ ಸಾಹಿತ್ಯ. ಓದು ಬರಹ ಬಾರದೆ ಇರುವಂತಹ ಅನರಸ್ಥ ಕನ್ನಡಿಗರು ರಚನೆ ಮಾಡಿರುವಂತಹ ಸಾಹಿತ್ಯ. ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಬಹಳ ಪ್ರಾಚಿನ ಕಾಲದಿಂದಲೂ ಮುನ್ನಡೆಸಿಕೊಂಡು ಬಂದಿದ್ದಾರೆ. ಜನರಿಗೆ ಆನಂದ, ನೀತಿಬೋಧೆ ಮತ್ತು ಸನ್ಮಾರ್ಗದಲ್ಲಿ ಮುನ್ನಡೆಸುವ ಸಾಹಿತ್ಯವೇ ಜಾನಪದ ಸಾಹಿತ್ಯ ಎಂದು ಶ್ರೀಗಳು ಹೇಳಿದರು.
ಜಾನಪದ ವಿದ್ವಾಂಸ ಶಂಭು ಬಳಿಗಾರ ಮಾತನಾಡಿ, ಕರ್ನಾಟಕ ಒಂದಾಗಬೇಕಾದರೆ ಬಹಳಷ್ಟು ಜನರ ತ್ಯಾಗ ಇದೆ. ದೇವರಾಜ ಅರಸರು ಕರ್ನಾಟಕ ಎಂದು ಹೆಸರಿಡಲು ವಿರೋಧ ಮಾಡಿದ್ದರು. ಮುಂದೆ ಅದೇ ಅರಸರು ಕರ್ನಾಟಕ ಎಂದು ಪನರ್​ ನಾಮಕರಣ ಮಾಡಿದರು. ಕನ್ನಡಿಗರು ಮಹಾಸ್ವಾಭಿಮಾನಿಗಳು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದ ಕಾರಣಕ್ಕೆ ಕನ್ನಡದ ಪ್ರಪ್ರಥಮ ಸಾಮ್ರಾಜ್ಯ ಸ್ಥಾಪನೆಯಾಯಿತು. ಮಯೂರವರ್ಮ ಕಾಂಚೀ ಪಲ್ಲವರನ್ನು ಸೋಲಿಸಿ ಪ್ರಪ್ರಥಮ ಕನ್ನಡದ ಕಂದಬ ಸಾಮ್ರಾಜ್ಯವನ್ನು ಸ್ಥಾಪಿಸಿದನು ಎಂದರು.
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ಶಂಭು ಬಳಿಗಾರ, . ಗು. ಸಿದ್ದಾಪೂರ ಅವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಸಂಗಡಿಗರು ವಚನಸಂಗೀತ ಜರುಗಿತು. ಸಾನ್ವಿ ಪಾಟೀಲ, ಬಸಪ್ಪ ಪಲ್ಲೇದ, ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net