ಕನ್ನಡ ನಾಡು, ನುಡಿಗೆ ಅಭೂತಪೂರ್ವ ಸೇವೆ ಸಲ್ಲಿಸಿದ ತೋಂಟದ ಸಿದ್ಧಲಿಂಗ ಶ್ರೀಗಳು: ತೋಂಟದ ಸಿದ್ಧರಾಮ ಶ್ರೀಗಳು

2664 Shivanuabava Book Bidugade
Published on

ವಿಜಯವಾಣಿ ಸುದ್ದಿಜಾಲ ಗದಗ
ತೋಂಟದ ಸಿದ್ಧಲಿಂಗ ಶ್ರೀಗಳು ಪುಸ್ತಕ ಅಂದರೆ ಬಹಳಷ್ಟು ಪ್ರೀತಿ. ಬದುಕಿನುದ್ದಕ್ಕೂ ಪುಸ್ತಕ ಪ್ರಕಟಣೆ, ಲೋಕಾರ್ಪಣೆ, ಶಿವಾನುಭವ ಕಾರ್ಯಕ್ರಮ, ನೆಲ ಜಲ, ಕನ್ನಡ ನಾಡು ನುಡಿಗಾಗಿ ಅಭೂತಪೂರ್ವ ಸೇವೆ ಸಲ್ಲಿಸಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಅಸಹಾಯಕರ, ದೀನ ದಲಿತರ, ರೈತರ, ರೋಗಿಗಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಸರ್ವಜನಾಂಗದವರನ್ನು ಪ್ರೀತಿಸಿ, ಸ್ವಾಗತಿಸಿ, ಗೌರವಿಸಿ ಮಠವನ್ನು ಸರ್ವಾಂಗ ಸುಂದರವಾಗಿ ಬೆಳೆಸಿದ್ದಾರೆ. ಸಮಾಜದ ಆಗು ಹೋಗುಗಳ ಬಗ್ಗೆ ನಿರಂತರ ಚಿಂತನೆ ಮಾಡುತ್ತಿದ್ದರು. ಶಿವಾನುಭವ ಕಾರ್ಯಕ್ರಮದ ಮೂಲಕ ತೆರೆಯ ಮರೆಯಲ್ಲಿ ಇರುವಂತಹ ಅನೇಕ ಸಾಹಿತಿಗಳನ್ನು, ಸಾಧಕರನ್ನು, ಸಂಶೋಧಕರನ್ನು, ಸಂಗೀತಗಾರರನ್ನು, ಕಲಾವಿದರನ್ನು ಬೇರೆ ಬೇರೆ ೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ, ಗೌರವಿಸಿ ನಾಡಿಗೆ ಪರಿಚಯಿಸಿದ್ದಾರೆ. ಸಮಾಜಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಮತ್ತು ಅನುಪಮವಾದುದು ಎಂದು ಶ್ರೀಗಳು ಹೇಳಿದರು
ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ. ಬಿ. ಹಳ್ಯಾಳ ಮಾತನಾಡಿ, ತೋಂಟದ ಸಿದ್ಧಲಿಂಗ ಶ್ರೀಗಳದ್ದು ತೆರೆದ ಮನಸ್ಸು. ಬಸವಾದಿ ಶಿವಶರಣರ ತತ್ವ ಸಂದೇಶಗಳನ್ನು ಜಾಗತಿಕ ಮಟ್ಟದಲ್ಲಿ ಸಾರಿದ್ದಾರೆ. ಸಮಾಜದಲ್ಲಿ ಹಾಸುಹೊಕ್ಕಾಗಿರುವ ಮೌಡ್ಯ ಆಚರಣೆ, ಭೇದ ಭಾವಗಳನ್ನು, ಕಂದಾಚಾರಗಳನ್ನು ಕಡೆಗಣಿಸಿ ಸಮಾಜವನ್ನು ತಿದ್ದುತ್ತ ಬಂದಿದ್ದಾರೆ. ಕನ್ನಡದ ಕುಲಗುರುಗಳಾಗಿ, ತ್ರಿವಿಧ ದಾಸೋಹ ಮೂತಿರ್ಗಳಾಗಿ, ಕೋಮು ಸೌಹಾರ್ಧತೆಯ ಹರಿಕಾರರಾಗಿ ಹಲವು ೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಸಂಜನಾ ಚಪ್ಪಳಗಾವಿ, ಶೇಖಣ್ಣ ಕಳಸಾಪೂರ, ಬಾಲಚಂದ್ರ ಭರಮಗೌಡರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ವಿವೇಕಾನಂದಗೌಡ ಪಾಟೀಲ ಇದ್ದರು.

(ತೋಂಟದ ಸಿದ್ಧರಾಮ ಶ್ರೀಗಳ ಪೋಟೋ ಬಳಸಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net