ಜಯದೇವಿ ಲಿಗಾಡೆ ಅವರ ಆದರ್ಶ ಬದುಕು, ಸಾಧನೆ ಸಿದ್ಧಿಗಳು ಅವಿಸ್ಮರಣೀಯ: ತೋಂಟದ ಸಿದ್ಧರಾಮ ಶ್ರೀಗಳು

04GDG11
ಗದಗ ತೋಂಟದಾರ್ಯ ಮಠದಲ್ಲಿ ಇತ್ತಿಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಡಿಡಿಪಿಐ ಹುದ್ದೆಯಿಂದ ನಿವೃತ್ತಿ ಹೊಂದಿದ ಜಿ. ಬಸಲಿಂಗಪ್ಪ ದಂಪತಿಗಳನ್ನು ಸನ್ಮಾನಿಸಲಾಯಿತು. ತೋಂಟದ ಶ್ರೀಗಳು, ಗೌರಕ್ಕ ಬಡಿಗಣ್ಣನವರ, ಸಮೀರ್​ ಹಂಪಸಾಗರ, ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಕನ್ನಡ ನಾಡು ನುಡಿಗೆ ವಿಶೇಷ ಕೊಡುಗೆ ನೀಡಿದವರಲ್ಲಿ ಜಯದೇವಿ ತಾಯಿ ಲಿಗಾಡೆಯವರು ಒಬ್ಬರು. ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಆದರ್ಶ ಬದುಕು, ಸಾಧನೆ ಸಿದ್ಧಿಗಳು ಅವಿಸ್ಮರಣೀಯ ಎಂದು ತೋಂಟದ ಸಿದ್ಧರಾಮ ಶ್ರೀಗಳು ತಿಳಿಸಿದರು.
ಇತ್ತೀಚೆಗೆ ಜರುಗಿದ ಲಿಂಗಾಯತ ಪ್ರಗತಿಶೀಲ ಸಂದ 2652 ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಯದೇವಿ ತಾಯಿ ಲಿಗಾಡೆಯವರು ಮರಾಠಿಯವರು. ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಅವರಲ್ಲಿತ್ತು. ಲಿಂಗಾಯತ ಧರ್ಮದ ಪ್ರಭಾವಕ್ಕೆ ಒಳಗಾಗಿ ಜೀವನದುದ್ದಕ್ಕೂ ಶರಣಜೀವಿಯಾಗಿ ಬಾಳಿ ಬದುಕಿದವರು ಜಯದೇವಿ ತಾಯಿಯವರು. ಸ್ವತಃ ಪುರಾಣಕಾವ್ಯ ಮತ್ತು ಕೃತಿಗಳನ್ನು ರಚಿಸಿದ್ದಾರೆ. ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ, ಕೊಡುಗೆ ಅನನ್ಯ ಮತ್ತು ಅನುಪಮ ಎಂದು ಶ್ರೀಗಳು ತಿಳಿಸಿದರು.
ಉಪನ್ಯಾಸ ನೀಡಿದ ಗೌರಕ್ಕ ಬಡಿಗಣ್ಣನವರ, ಬಸವತತ್ವ ಚಿಂತಕರಾಗಿದ್ದ ಜಯದೇವಿ ತಾಯಿ ಲಿಗಾಡೆಯವರು ಬಾಲ್ಯದಿಂದಲೂ ವಚನ ಸಾಹಿತ್ಯದ ಪ್ರಭಾವಕ್ಕೆ ಒಳಗಾದವರು. ಕನ್ನಡ ನಾಡು ನುಡಿಗೆ ಸಂಕಷ್ಟಗಳು ಎದುರಾದಾಗ ಜನರಲ್ಲಿ ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ಅವರ ಸಮಾಜಮುಖಿ ಬದುಕು ನಮಗೆಲ್ಲ ಮಾದರಿಯಾಗಿದೆ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪಡೆದ ನಿಮಿತ್ಯ ಶರಣ ಡಾ. ರಾಜಗುರು ಗುರುಸ್ವಾಮಿ ಕಲಕೇರಿ, ಶಾಲಾ ಶಿಣ ಇಲಾಖೆಯ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿದ ನಿಮಿತ್ಯ ಜಿ. ಎಂ. ಬಸವಲಿಂಗಪ್ಪ ಮತ್ತು ಶರಣು ಗದಗ ಅವರನ್ನು ಸನ್ಮಾನಿಸಲಾಯಿತು.
ಸಮೀರ್​ ಹಂಪಸಾಗರ, ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net