ಪುರುಷರಷ್ಟೇ ಮಹಿಳೆಯರೂ ಸಮಾನರು: ಶಾಂತಲಿಂಗ ಶ್ರೀಗಳು

22GDg06
ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಕಾಯಕದಲ್ಲಿ ನಿರತರಾಗಿರುವ ಆಶಾ ಸ್ವಾಮಿ ಅವರನ್ನು ಶಿವಾನುಭವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶಾಂತಲಿಂಗ ಶ್ರೀಗಳು, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಬಸವಾದಿ ಶರಣರ ಕಾಲದಲ್ಲಿ ನೂರಾರು ಶರಣೆಯರು ವಚನಕಾತಿರ್ಯರಾಗಿದ್ದರು. ಪುರುಷರಷ್ಟೇ ಮಹಿಳೆಯರೂ ಸಮಾನರು ಎಂಬ ತತ್ತ್ವ ಸಿದ್ಧಾಂತ ಬಸವಾದಿ ಶಿವಶರಣರ ಕಾಲದಿಂದಲೂ ಬಂದಿದೆ ಎಂದು ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ಹೇಳಿದರು.
ನಗರದ ತೊಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಎಲ್ಲಾ ಶರಣೆಯರು ಅನುಭವ ಮಂಟಪದಲ್ಲಿ ಪಾಲ್ಗೊಳ್ಳುತ್ತಿದ್ದರು. ಮೊಟ್ಟಮೊದಲ ಕವಯತ್ರಿ ಅಕ್ಕಮಹಾದೇವಿ ಆಗಿದ್ದರು. ಬಸವಾದಿ ಶಿವಶರಣರ ನಂತರ ಕೆಲವು ಕಾಲ ಸ್ತಬ್ಧವಾಗಿದ್ದ ವಚನಸಾಹಿತ್ಯವನ್ನು 15 ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಮುಂದುವರೆಸಿಕೊಂಡು ಬಂದರು ಎಂದರು.
ಮಹಿಳೆ ಮತ್ತು ಸಮಸ್ಯೆ ಹಾಗೂ ಸವಾಲುಗಳು ಕುರಿತು ಸಾಹಿತಿ ಸಾವಿತ್ರಿ ಮುಜುಮದಾರ ಉಪನ್ಯಾಸ ನೀಡಿ, ಮಹಿಳೆಯರು ತಮ್ಮ ಅಸ್ತಿತ್ವಕ್ಕಾಗಿ, ಶಿಣಕ್ಕಾಗಿ, ಹಕ್ಕುಗಳಿಗಾಗಿ, ಮತದಾನಕ್ಕಾಗಿ ಅನೇಕ ಹೋರಾಟಗಳಿಂದ ಪಡೆದಿರುವ ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿದಿನವೂ ಮಹಿಳೆಯರನ್ನು ಗೌರವಿಸಬೇಕು, ಆರಾದಿಸಬೇಕು, ಸ್ಮರಿಸಬೇಕು. ಮಹಿಳೆಗೂ, ಮಹಿಳಾ ಜೀವನಕ್ಕೂ, ಬದುಕಿಗೂ, ಸ್ವಾತಂತ್ರ್ಯಕ್ಕೂ 12 ನೇ ಶತಮಾನ ಬಹಳ ಮುಖ್ಯ ಅವಧಿ. 12 ನೇ ಶತಮಾನದ ಪ್ರಾರಂಭದಲ್ಲಿ ಅತ್ಯಂತ ಹೀನವಾಗಿ, ಕ್ರೌರ್ಯದಿಂದ ನೋಡುವ ಪರಿಸ್ಥಿತಿ ಇತ್ತು. ಮಹಿಳೆಯನ್ನು ವ್ಯಕ್ತಿಯಾಗಿ ಕಾಣದೇ, ವಸ್ತುವಾಗಿ ನೋಡುತ್ತಿದ್ದರು. ಇಂತಹ ಕಷ್ಟದ ಸನ್ನಿವೇಶದಲ್ಲಿ ಮಹಿಳೆಯರಿಗೆ ಸಮಾನತೆ, ಧ್ವನಿಯನ್ನು ಕೊಟ್ಟವರು ಅಣ್ಣ ಬಸವಣ್ಣನವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಕಾಯಕದಲ್ಲಿ ತೋಡಗಿರುವ ರಾಮನಗರ ಜಿಲ್ಲೆಯ ಆಶಾ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶಿವಾನುಭವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವಾಷಿರ್ಕೋತ್ಸವ ಆಚರಿಸಲಾಯಿತು. ಅಕ್ಕಮಹಾದೇವಿ ಯೋಗವಿಜ್ಞಾನ ಕೇಂದ್ರದ ಸದಸ್ಯರು ಯೋಗನೃತ್ಯ ಪ್ರದಶಿರ್ಸಿದರು.
ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net