ಕನ್ನಡ ನಾಡಿನ ರಾಜ ಮಹಾರಾಜರ ಕೊಡುಗೆ ಅಪಾರ: ತೋಂಟದ ಸಿದ್ಧರಾಮ ಶ್ರೀ

17GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಎರಡನೇ ಪುಲಿಕೇಶಿ ನರ್ಮದಾ ನದಿಯ ದಂಡೆಯ ಮೇಲೆ ಹರ್ಷವರ್ಧನನ್ನು ಸೋಲಿಸಿ ಭಾರತದ ಮೇಲೆ ಪ್ರಭುತ್ವ ಸಾಧಿಸಿದ್ದನು. ಕನ್ನಡ ಭಾಷೆ, ಪ್ರದೇಶ ವ್ಯಾಪಕವಾಗಿ ಬೆಳೆಯಲು ನಮ್ಮ ನಾಡಿನ ರಾಜ ಮಹಾರಾಜರ ಧೈರ್ಯ, ಶೌರ್ಯ, ಕೊಡುಗೆ ಅಪಾರ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದ ಆವರಣದಲ್ಲಿ ಇತ್ತಿಚೆಗೆ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಸಿದ್ಧರಾಮ ಶ್ರೀಗಳು, ವಿಜಯನಗರ ಕಾಲದ ಲಕ್ಕಣ್ಣ ದಂಡೇಶ ಸಾಹಿತಿ, ಸಂಶೋಧಕ, ಮಂತ್ರಿ, ದಂಡನಾಯಕನಾಗಿದ್ದನು. ಲಕ್ಕಣ್ಣ ದಂಡೇಶ ಶ್ರೀಲಂಕಾ ದೇಶದ ಮೇಲೆ ಯುದ್ಧ ಸಾರಿ ಅಧಿಪತ್ಯ ಸಾಧಿಸಿದ್ದನು. ಭಾರತ ಮತ್ತು ಕರ್ನಾಟಕ ಪ್ರದೇಶವನ್ನು ವಿಸ್ತರಿಸುವಲ್ಲಿ ಕನ್ನಡ ನಾಡಿನ ರಾಜ ಮಹಾರಾಜರ ಕೊಡುಗೆ ಸ್ಮರಣೀಯ. ಗದುಗಿನ ಭಾರತ ರಚಿಸಿದ ಕುಮಾರವ್ಯಾಸ ಮತ್ತು ಅನೇಕ ಮಹಾನುಭಾವರು ಗದುಗಿನವರೇ ಆಗಿದ್ದು, ಕರ್ನಾಟಕ ನಾಮಕರಣಕ್ಕೂ ಗದುಗಿಗೂ ಅವಿನಾಭಾವ ಸಂಬಂಧವಿದೆ. ಕನ್ನಡ ಭಾಷೀಕರ ಪ್ರದೇಶವನ್ನು ಒಟ್ಟೂಗೂಡಿಸಿ ಕರ್ನಾಟಕ ರಾಜ್ಯವನ್ನು ನಿರ್ಮಾಣ ಮಾಡಿದ ಕೀತಿರ್ ಗದಗ ನಗರದ ಹಿರಿಯರಿಗೆ ಸಲ್ಲುತ್ತದೆ ಎಂದು ಹೇಳಿದರು.
ಉಪನ್ಯಾಸಕ ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿದ ಅವರು, ಕರ್ನಾಟಕ ಎನ್ನುವ ಪದ ಅನೇಕ ಸಾಹಿತ್ಯ, ಪುರಾಣ, ಶಾಸನಗಳಲ್ಲಿ ಬೆಳೆದು ಬಂದಿದೆ. ಆಲೂರು ವೆಂಕಟರಾಯ, ಹುಯಿಲಗೋಳ ನಾರಾಯಣರು, ಅಂದಾನಪ್ಪ ದೊಡ್ಡಮೇಟಿಯವರು ಸೇರಿ ಅನೇಕರು ಕರ್ನಾಟಕ ಹೆಸರಿಡುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿರೋಳ ತೋಂಟದಾರ್ಯ ಶಾಖಾಮಠದ ಲಿಂಗೈಕ್ಯ ಗುರುಬಸವ ಶ್ರೀಗಳು ಗದಗ ತೋಂಟದಾರ್ಯ ಮಠದ ಆಶ್ರಯದಲ್ಲಿ ಬೆಳೆದಿದ್ದರು. ತೋಂಟದ ಸಿದ್ಧಲಿಂಗ ಶ್ರೀಗಳಿಂದ ಕನ್ನಡ ದೀೆ ಪಡೆದು ಮರಾಠಿಗರು ಹೆಚ್ಚಾಗಿರುವ ಗಡಿಭಾಗದ ಚಿಂಚಣಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಂತ ಕಾರ್ಯ ಗುರುಬಸವ ಶ್ರೀಗಳು ಮಾಡಿದ್ದಾರೆ. ಸಾಹಿತಿಗಳನ್ನು, ಉಪನ್ಯಾಸಕರನ್ನು, ವಿದ್ವಾಂಸರನ್ನು, ಸಂಶೋದಕರನ್ನು ಮಠಕ್ಕೆ ಬರಮಾಡಿಕೊಂಡು ಗಡಿಭಾಗದಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಿರೋಳ ತೋಂಟದಾರ್ಯ ಶಾಖಾಮಠದ ಲಿಂಗೈಕ್ಯ ಗುರುಬಸವ ಶ್ರೀಗಳಿಗೆ ನುಡಿನಮನ ಸಲ್ಲಿಸಲಾಯಿತು.
ವೀರಯ್ಯ ಹೊಸಮಠ, ಗುರುನಾಥ ಸುತಾರ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಸುರೇಶ ನಿಲೂಗಲ್​ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net