

ಗದಗ:
ತಾಲೂಕಿನ ಹರ್ಲಾಪುರ ಗ್ರಾಮದ ಕೊಟ್ಟೂರೇಶ್ವರ ಮಠದಲ್ಲಿ ಸೋಮವಾರ 285ನೇ ಶಿವಾನುಭವಗೋಷ್ಠಿ ಮತ್ತು ಕೆವಿಎಸ್ಆರ್ ಕಾಲೇಜಿನ ಎನ್ಎಸ್ಎಸ್ ಶಿಬಿರಾಥಿರ್ಗಳ ಸಾಂಸತಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿದ ಕೊಟ್ಟೂರೇಶ್ವರ ಶ್ರೀಗಳು, ಮಹಾತ್ಮ ಗಾಂದೀಜಿಯವರ ಸತ್ಯ, ಅಂಹಿಸೆ, ತ್ಯಾಗದ ಗುಣಗಳನ್ನು ವಿದ್ಯಾಥಿರ್ಗಳು ಅಳವಡಿಸಿಕೊಂಡಾಗ ಗುರಿ ಮುಟ್ಟಲು ಸಾಧ್ಯ. ಎನ್ಎಸ್ಎಸ್ ಶಿಬಿರಾಥಿರ್ಗಳು ಶೃದ್ದೆಯಿಂದ ಶಿಬಿರದಲ್ಲಿ ಭಾಗವಹಿಸಿದಾಗ ಮಾತ್ರ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಕುರಿತು ತಿಳಿಯುತ್ತದೆ ಎಂದರು.
ಪಶು ವೈದ್ಯಕಿಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಗನ್ನಥರಾವ್ ಮಾತನಾಡಿ, ಪ್ರಾಣಿ ಜನ್ಯ ರೋಗಗಳ ಕುರಿತು ಉಪನ್ಯಾಸ ನೀಡಿದರು. ಡಾ ಸಂತೋಷ ಸಜ್ಜನ ಅವರು ಪ್ರಾಣಿ ಜೀವ ಸಂಕುಲದ ಕುರಿತು ವಿವರಿಸಿದರು.
ಪಿಎಲ್ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಮಾರುತಿರೆಡ್ಡಿ ಕೊಣ್ಣೂರು ದಂಪತಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಪ್ರದಿಪ ನಾಯಕ, ಮುಖ್ಯೋಪಾಧ್ಯಯ ಕೆ. ಬಿ. ಕೊಣ್ಣೂರು, ಕೆ.ಬಿ. ವಿರಾಪೂರ, ಸಿದ್ಧಲಿಂಗೇಶ ಯಾಳವಾಡ, ನವೀನ ಟಿಕಾರ್, ರಾಮಣ್ಣ ಬೆಳಧಡಿ ಹಲವರು ಇದ್ದರು.