

ವಿಜಯವಾಣಿ ಸುದ್ದಿಜಾಲ ಗದಗ
ನಮ್ಮ ಭಾರತೀಯ ಸಂಸತಿಯಲ್ಲಿ ಹಿರಿಯರನ್ನು ಗೌರವಿಸುವುದು ಆದ್ಯ ಕರ್ತವ್ಯವಾಗಿದೆ. ಹಿರಿಯರನ್ನು ಗೌರವಿಸದೇ ಹೋದರೆ ಕರ್ತವ್ಯಚ್ಯುತಿ ಮಾಡಿದಂತೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತಿಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಸಂಸತಿ ಉಳಿದು, ಬೆಳೆಯಬೇಕಾದರೆ, ಅಜ್ಜ, ಅಜ್ಜಿ, ಅಪ್ಪ ಅಮ್ಮ, ಮಕ್ಕಳು ಇವರೆಲ್ಲರೂ ಕೂಡಿ ಒಂದೇ ಮನೆಯಲ್ಲಿದ್ದರೆ ಸಂಸ್ಕಾರ ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಹಿರಿಯರ ಬಗ್ಗೆ ಅಸಡ್ಡೆ ತೋರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಹಿರಿಯರನ್ನು ಗೌರವಿಸಿದಾಗ ಮಾತ್ರ ನಾವು ಒಳ್ಳೆಯ ನಾಗರಿಕರಾಗಲು ಸಾಧ್ಯ ಎಂದು ಶ್ರೀಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂ ಕಳೆದ 52 ವರ್ಷಗಳಿಂದ ಧಾಮಿರ್ಕ, ಸಾಂಸತಿಕ, ಸಾಮಾಜಿಕ ೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತ ಬಂದಿದೆ. ಶಿವಾನುಭವ ವೇದಿಕೆ ಸಂಗೀತಗಾರರು, ನಿರೂಪಕರು, ಸಾಹಿತಿಗಳು, ಪ್ರವಚನಕಾರರು, ಉಪನ್ಯಾಸಕರು ಹೀಗೆ ಸಾಕಷ್ಟು ಪ್ರತಿಭೆಗಳನ್ನು ಬೆಳಕಿಗೆ ತಂದಿದೆ. ತೆರೆಯ ಮರೆಯ ಹಿಂದಿನ ಅನೇಕ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸಿ ನಾಡಿಗೆ ಪರಿಚಯಿಸಿದ ಶ್ರೇಯಸ್ಸು ಲಿಂಗಾಯತ ಪ್ರಗತಿಶೀಲ ಸಂದ್ದಾಗಿದೆ ಎಂದರು.
ಉಪನ್ಯಾಸಕ ಕೆ.ಎಚ್. ಬೇಲೂರು ಮಾತನಾಡಿ, ನಮ್ಮ ಪೂರ್ವಜರು ಹೇಳುತ್ತಿರುವ ಕಥೆಗಳನ್ನು ಕೇಳುತ್ತ ಬೆಳೆದಿದ್ದೇವೆ. ಆ ಕಾಲದಲ್ಲಿರುವ ಪ್ರೀತಿ, ವಿಶ್ವಾಸ, ಬಾಂಧವ್ಯಗಳು ಇಂದು ಕಾಣುವುದು ಅಪರೂಪ. ದೂರದ ವಿದೇಶಕ್ಕೆ ದುಡಿಯಲು ಹೋದವರು ತಮ್ಮ ತಂದೆ ತಾಯಿಗಳನ್ನು ಮರೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ. ಜಿ. ಬಿ. ಪಾಟೀಲ ಅವರು ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂದ 53 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿಶ್ವ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು. ಸಂದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಶೇಖಣ್ಣ ಕಳಸಾಪೂರ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಹಲವರು ಇದ್ದರು.