ಬಸವಾದಿ ಶಿವಶರಣರು ಜನರಲ್ಲಿ ಅರಿವು ಮತ್ತು ವೈಚಾರಿಕತೆ ಬಿಂಬಿಸಿದ್ದಾರೆ: ತೋಂಟದ ಶ್ರಿಗಳು

26GDG04
ತೊಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಎಸ್​.ಎ. ಮುಗದ ಉಪನ್ಯಾಸ ನೀಡಿದರು. ತೋಂಟದ ಶ್ರೀಗಳು, ರತ್ನಕ್ಕ ಪಾಟೀಲ, ವಿವೇಕಾಂದಗೌಡ ಪಾಟೀಲ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಬಸವಾದಿ ಶಿವಶರಣರು ಜನರಲ್ಲಿ ಅರಿವು ಮತ್ತು ವೈಚಾರಿಕತೆ ಬಿಂಬಿಸುವ ಕಾರ್ಯ ಮಾಡಿದ್ದಾರೆ. ಮೌಢ್ಯತೆಗಳ ನಿವಾರಣೆಗೆ ಬಸವಣ್ಣನವರು ಅನೇಕ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರ ತತ್ವ, ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂ ಮತ್ತು ಜಗಜ್ಯೋತಿ ಬಸವಣ್ಣನವರ 856ನೇ ಪುಣ್ಯಸ್ಮರಣೆಯ ನಿಮಿತ್ಯ ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು, 900 ವರ್ಷಗಳ ಹಿಂದೆ ವಿಜ್ಞಾನ ಮುಂದುವರೆದಿದ್ದಿಲ್ಲ. ಸಮಾಜ ಅಂಧಶ್ರದ್ಧೆ, ಮೂಢನಂಬಿಕೆ, ದುರ್ವ್ಯಸನ, ಅಸಮಾನತೆಯಿಂದ ತುಂಬಿ ಹೋಗಿತ್ತು. ಬಸವಾದಿ ಶಿವಶರಣರು ಜನರನ್ನು ಅಂಧಶ್ರದ್ಧೆಯಿಂದ ಮುಕ್ತರನ್ನಾಗಿಸಿ ಶಾಂತಿ, ಸಮಾನತೆ, ಸಂತೃಪ್ತಿಯಿಂದ ಬದುಕುವಂತಹ ಸಮಾಜಕ್ಕೆ ಶ್ರಮಿಸಿದ್ದಾರೆ. ನಾವು ಮಾಡುವ ಭಕ್ತಿಯೂ ಕೂಡ ಜ್ಞಾನ ಮತ್ತು ಅರಿವಿನಿಂದ ಕೂಡಿರಬೇಕು. ಮನುಷ್ಯರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಇದ್ದರೆ ಮಾತ್ರ ಪ್ರಗತಿಪರ ಲಣ ಎಂದು ಶ್ರಿಗಳು ಹೇಳಿದರು.
ಶ್ರಾವಣಮಾಸ ಕುರಿತು ವಿವರಿಸಿದ ಶ್ರೀಗಳು, ಶ್ರವಣ ಎಂದರೆ ಕೇಳುವುದು. ಪ್ರತಿಯೊಬ್ಬರು ಶ್ರಾವಣ ಮಾಸದಲ್ಲಿ ಶರಣರ ಸಂದೇಶ, ಚರಿತ್ರೆ, ವಚನಗಳನ್ನು ಕೇಳಿ ಮನನ ಮಾಡಿಕೊಳ್ಳಬೇಕು. ಒಳ್ಳೆಯ ವಿಚಾರಗಳನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಎಸ್​.ಎ. ಮುಗದ ಉಪನ್ಯಾಸ ನೀಡಿ, ಪೌಷ್ಠಿಕವಾದ ಆಹಾರವನ್ನು ಮಣ್ಣುಪಾಲು ಮಾಡುವ ಬದಲು ಬಡಮಕ್ಕಳಿಗೆ ಉಣಿಸಬೇಕು ಎಂದು ತಿಳಿಸಿದರು. ಅನೇಕ ಮೌಢ್ಯ ಸಂಪ್ರದಾಯಗಳನ್ನು ಕೈಬಿಟ್ಟು ಜನರು ಪ್ರಜ್ಞಾವಂತರಾಗಿ ವತಿರ್ಸಬೇಕು ಎಂದರು.
ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net