ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಸೇವೆ ಅಗಾಧ : ಬೈರನಹಟ್ಟಿ ಶ್ರೀಗಳು

13GDG01
Published on

ವಿಜಯವಾಣಿ ಸುದ್ದಿಜಾಲ ಗದಗ
ಬಸವಣ್ಣನವರು ಜಾತಿ ಮತ ಪಂಥಗಳನ್ನು ತೊಡೆದು ಸಮಾನತೆಯ ಸಂದೇಶವನ್ನು ಸಾರಿ ವಿಶ್ವಗುರು ಎನಿಸಿದ್ದಾರೆ. ಅದೇ ರೀತಿ ಕುವೆಂಪು ಅವರು ನಾವೆಲ್ಲರೂ ಭಾರತೀಯರು ಒಂದೇ ಎಂಬ ಸಂದೇಶವನ್ನು ಸಾರಿ ವಿಶ್ವಮಾನವರಾದರು ಎಂದು ಬೈರನಹಟ್ಟಿ ಶ್ರೀಗಳು ಹೇಳಿದರು.
ತೊಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಅವರು, ಬಸವೇಶ್ವರರ ಬಗ್ಗೆ ಅಪಾರ ಭಕ್ತಿ ಶ್ರದ್ದೆಯನ್ನು ಕುವೆಂಪು ಹೊಂದಿದ್ದರು. ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಅವರ ಸೇವೆ ಮತ್ತು ಕೊಡುಗೆ ಅಗಾಧವಾದುದು ಎಂದರು.
ಕುವೆಂಪು ಬದುಕು&ಬರಹ ಕುರಿತು ಉಪನ್ಯಾಸಕ ನಾಗರಾಜ ಹೊನ್ನೂರ ಮಾತನಾಡಿ, ಕುವೆಂಪು ಅವರ ಆತ್ಮವೇ ಕನ್ನಡವಾಗಿತ್ತು. ದೇಹ ಭಾರತವಾಗಿತ್ತು, ವಿಚಾರಗಳು ವಿಶ್ವಮಯವಾಗಿದ್ದವು. ಕನ್ನಡ ನಾಡು&ನುಡಿಗೆ ಕುವೆಂಪು ಅವರ ಕೊಡುಗೆ ಅನನ್ಯ ಮತ್ತು ಅನುಪಮ. ಇಂದಿನ ಮಕ್ಕಳನ್ನು ವಿಶ್ವಮಾನವರನ್ನಾಗಿ ರೂಪಿಸುವಲ್ಲಿ ಕುವೆಂಪು ಅವರ ಪ್ರತಿಯೊಂದು ವಿಚಾರಧಾರೆಗಳು ಅತ್ಯಂತ ಪ್ರಮುಖವಾಗಿವೆ ಎಂದು ಅಭಿಪ್ರಾಯಪಟ್ಟರು.
ಶಾಂತಲಿಂಗ ಶ್ರೀಗಳು ಮಾತನಾಡಿದರು. ಗುರುನಾಥ ಸುತಾರ ಮತ್ತು ಅಶೋಕ ಸುತಾರ ತಂಡದಿಂದ ವಚನ ಸಂಗೀತ ಜರುಗಿತು. ಜಾನ್​ ದೊಡಮನಿ, ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ ಹಲವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net