

ವಿಜಯವಾಣಿ ಸುದ್ದಿಜಾಲ ಗದಗ
ಯೋಗದಿಂದ ಮನುಷ್ಯನಿಗೆ ಶಾಂತಿ, ನೆಮ್ಮದಿ, ಆರೋಗ್ಯ ಲಭಿಸುತ್ತದೆ. ಮನುಷ್ಯನ ಮನಸ್ಸು ಮತ್ತು ಶರೀರ ಸಮತೋಲನ ಆಗಿರಬೇಕಾದರೆ ಯೋಗಾಭ್ಯಾಸ ಮತ್ತು ನಿಯಮಿತ ಆಹಾರಪದ್ಧತಿ ಅನುಸರಿಸಬೇಕು. ಯೋಗದಿಂದ ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗುತ್ತದೆ ಎಂದು ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂದ 2646 ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಅಡಿದ ಶ್ರೀಗಳು, ಜೀವನದಲ್ಲಿ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. 2000 ಕ್ಕಿಂತಲೂ ಅಧಿಕ ಪ್ರಾಚಿನ ಇತಿಹಾಸವನ್ನು ಯೋಗಶಾಸ್ತ್ರ ಹೊಂದಿದೆ. ವಿಶ್ವಕ್ಕೆ ಯೋಗದ ಪರಿಚಯ ಮಾಡಿಕೊಟ್ಟ ಹೆಮ್ಮೆ ನಮ್ಮ ಭಾರತ ದೇಶಕ್ಕಿದೆ. ಅಧಿಕ ಸಂಖ್ಯೆಯಲ್ಲಿ ಜನರು ಮಧುಮೇಹ, ರಕ್ತೋತ್ತಡ, ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಯೋಗದಿಂದ ಸಾಕಷ್ಟು ಕಾಯಿಲೆಗಳಿಗೆ ಪರಿಹಾರ ಸಾಧ್ಯವಿದೆ ಎಂದು ಶ್ರೀಗಳು ಹೇಳಿದರು.
ಉಪನ್ಯಾಸಕ ಪ್ರಕೃತಿ ಚಿಕಿತ್ಸಾ ವೈದ್ಯ ಸತೀಶ ಹೊಂಬಾಳಿ ಮಾತನಾಡಿದ, ವ್ಯಕ್ತಿಯ ದೈಹಿಕ, ಮಾನಸಿಕ, ಶಾರೀರಿಕ, ಆದ್ಯಾತ್ಮಿಕ ಗುಣಮಟ್ಟಕ್ಕೆ ಆರೋಗ್ಯ ಎನ್ನುತ್ತೇವೆ. ಇದನ್ನು ಸಾಧಿಸಲು ಯೋಗದಿಂದ ಮಾತ್ರ ಸಾಧ್ಯ. ಯೋಗದಿಂದ ಸ್ವಾರ್ಥಪರ ಚಿಂತನೆಗಳು ದೂರವಾಗಿ ಜಗತ್ತಿನ ಒಳಿತಿಗಾಗಿ ಚಿಂತನೆಗಳನ್ನು ಮಾಡಲು ಸಹಕಾರಿ ಆಗುತ್ತದೆ ಎಂದರು.
ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಡಾ. ಅಬ್ದುಲ್ಖಾದರ್ ನಡಕಟ್ಟಿನ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗುವ ಯಂತ್ರೋಪಕರಣಗಳು ಲಭ್ಯವಿದ್ದು, ರೈತರು ಅವುಗಳ ಸದುಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು. ಸ್ವತಃ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು, ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದು ತಿಳಿಸಿದರು.
ಕೆ.ಎಚ್. ಪಾಟೀಲ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆ ಹಾಗೂ ಮನು ಯೋಗ ಕೇಂದ್ರ ಯೋಗ ಸಾಧಕರಿಂದ ಯೋಗ ಪ್ರಾತ್ಯಕೆ ಜರುಗಿತು. ಶೇಖಣ್ಣ ಕಳಸಾಪೂರ, ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಇದ್ದರು.