ವಚನಸಾಹಿತ್ಯ ಮಹಾನಪುರುಷ ಮಡಿವಾಳ ಮಾಚಿದೇವರು: ಡಾ. ತೋಂಟದ ಸಿದ್ಧರಾಮ ಶ್ರೀಗಳು

17GDG06
ತೋಂಟದಾರ್ಯಮಠದಲ್ಲಿ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ವಿದ್ಯಅಥಿರ್ನಿ ಭುವನೇಶ್ವರಿ ಕೋಳಿವಾಡ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಮ ಶ್ರೀಗಳು, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಮಡಿವಾಳ ಮಾಚಿದೇವರು 12 ನೇ ಶತಮಾನದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದವರು. ಶರಣ ಸಂದೇಶವನ್ನು ಅತ್ಯಂತ ದಿಟ್ಟತನದಿಂದ ಪ್ರಸಾರ ಮಾಡಿದ್ದಲ್ಲದೆ, ಸಂಪ್ರದಾಯವಾದಿಗಳಿಂದ ವಚನಸಾಹಿತ್ಯ ಹಾಳಾಗದಂತೆ ಸಂರಣೆ ಮಾಡಿದ ಮಹಾನಪುರುಷರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೊಮಟದಾರ್ಯ ಮಠದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವಣ್ಣನವರು ಬಿದ್ದವರನ್ನು, ತುಳಿತಕ್ಕೆ ಒಳಗಾದವರನ್ನು, ದೀನರನ್ನು, ದಲಿತರನ್ನು ಎಲ್ಲರನ್ನೂ ಪ್ರೀತಿಸಿದರು. ಪ್ರತಿಯೊಂದು ವಿಷಯದಲ್ಲಿಯೂ ಬಸವಣ್ಣನವರು ಅಪಾರ ಪ್ರೀತಿಯನ್ನು ಹೊಂದಿದ್ದರು ಎಂದು ಶ್ರೀಗಳು ಮಾತನಾಡಿದರು.
ಗಿರಿಜಕ್ಕ ಧರ್ಮರಡ್ಡಿ ಮಾತನಾಡಿ, ಮಡಿವಾಳ ಮಾಚಿದೇವರು 346 ವಚನಗಳನ್ನು ಬರೆದಿದ್ದಾರೆ. ಮಡಿವಾಳ ಮಾಚಿದೇವರು ಬಟ್ಟೆ ಒಗೆಯುವ ಕಾಯಕದೊಂದಿಗೆ ಮಹಾನಚಿಂತಕರು, ಆದರ್ಶವಾದಿಗಳು, ಸಮಾಜದ ಕಳಕಳಿಯುಳ್ಳವರು ಆಗಿದ್ದರು. ಸಮಾಜದಲ್ಲಿ ಸಮಾನತೆ ತರಲು ಮತ್ತು ಮೂಡನಂಬಿಕೆಗಳನ್ನು ಹೊಡೆದೊಡಿಸಲು ಉನ್ನತ ಆದರ್ಶಗಳನ್ನು ಹೊಂದಿದ್ದರು. ವಚನ ಸಾಹಿತ್ಯ ನಿಂತಿರುವುದು ಭಕ್ತಿ ಮೇಲೆ, ಭಕ್ತಿಯಿಂದ ಮನುಷ್ಯ ಶರಣ ಆಗಲು ಸಾಧ್ಯ ಎಂದು ಮಾತನಾಡಿದರು.
ಖೇಲೋ ಇಂಡಿಯಾ ರಾಷ್ಟ್ರಮಟ್ಟದ ಬಾಲಕಿಯರ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ತೋಂಟದಾರ್ಯ ಪ್ರೌಢಶಾಲೆಯ ವಿದ್ಯಾಥಿರ್ನಿ ಭುವನೇಶ್ವರಿ ಕೋಳಿವಾಡ ಅವರನ್ನು ಸನ್ಮಾನಿಸಲಾಯಿತು.
ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​ ಇತರರು ಇದ್ದರು.

ತೋಂಟದಾರ್ಯಮಠದಲ್ಲಿ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ವಿದ್ಯಅಥಿರ್ನಿ ಭುವನೇಶ್ವರಿ ಕೋಳಿವಾಡ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಮ ಶ್ರೀಗಳು, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net