

ಮಮದಾಪುರ: ಸ್ಥಳೀಯ ಶ್ರೀ ಚರಮೂರ್ತೀಶ್ವರ ಮಹಾಮಠದಲ್ಲಿ ಶ್ರಾವಣ ಮಾಸ ನಿಮಿತ್ತ ಆ.17ರಿಂದ 23ರ ವರೆಗೆ ಜರುಗಲಿರುವ ನಿರಂತರ ಶಿವನಾಮ ಸ್ಮರಣೆ ಸಪ್ತಾಹ ಪ್ರಯುಕ್ತ ಭಾನುವಾರ ಬೆಳಗ್ಗೆ 6ಕ್ಕೆ ಶ್ರೀ ಚರಮೂರ್ತೀಶ್ವರ ಅಜ್ಜನವರ ಮಹಾ ಗದ್ದುಗೆಗೆ ವಿಶೇಷ ಪೂಜೆ ನೆರವೇರಿತು.
ಬಳಿಕ ಅಗ್ನಿ ಹೋಮದೊಂದಿಗೆ ಹರಳಿಕಟ್ಟಿ ನಿಜಗುಣ ಸ್ವಾಮೀಜಿ, ಶ್ರೀ ಚರಮೂರ್ತೀಶ್ವರ ಸಾನ್ನಿಧ್ಯದಲ್ಲಿ ಶಿವನಾಮಸ್ಮರಣೆ ಸಪ್ತಾಹ ಪ್ರಾರಂಭಗೊಂಡಿತು. ಶಾಂತಾರೂಢ ಸ್ವಾಮೀಜಿ, ಶಿವಯ್ಯ ಸ್ವಾಮೀಜಿ, ಡಾ. ಸಿದ್ದಲಿಂಗ ದೇವರು, ಈರಯ್ಯ ಸ್ವಾಮೀಜಿ, ಭಕ್ತಾದಿಗಳು ಪಾಲ್ಗೊಂಡಿದ್ದರು.