ಭಕ್ತಿಸುಧೆಯಲ್ಲಿ ತೇಲಿಸಿದ ಶಿವಾಮೃತ

KND SHIVAMRUTA
Published on

ಕುಂದಗೋಳ: ಮಹಾಶಿವರಾತ್ರಿಯ ಪ್ರಯುಕ್ತ ಪಟ್ಟಣದ ಶಿವಾಜಿನಗರದ ಐತಿಹಾಸಿಕ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ನಿರಾಮಯ ಫೌಂಡೇಷನ್ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಹಾಗೂ ದೇವಸ್ಥಾನ ಟ್ರಸ್ಟ್ ವತಿಯಿಂದ ‘ಶಿವಾಮೃತ’ ಶಿವರಾತ್ರಿ ಉತ್ಸವವು ಜನಮನವನ್ನು ಶಿವಮಯಗೊಳಿಸಿತು.

ವೇದಿಕೆಯಲ್ಲಿ ಶಿವಲಿಂಗ ಪ್ರತಿಷ್ಟಾಪಿಸಿ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6ರವರೆಗೆ ಅಹೋರಾತ್ರಿ ಪೂಜೆ, ರುದ್ರಪಠಣ, ಬಿಲ್ವಾರ್ಚನೆ, ಶಾಸ್ತ್ರಿಯ ಸಂಗೀತ, ಭಕ್ತಿ ಗೀತೆ, ನೃತ್ಯ, ಗಿಟಾರ ವಾದನ, ಜಾನಪದ ಗಾಯನ - ನರ್ತನ, ಮಲ್ಲಕಂಬ ಪ್ರದರ್ಶನ, ಪ್ರವಚನ ಸೇರಿ ಅನೇಕ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕುಂದಗೋಳದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಶ್ರೀಗಳು, ಶ್ರೀ ಶಿವಾನಂದ ಸ್ವಾಮೀಜಿ ಹಾಗೂ ಅಭಿನವ ಶ್ರೀ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಡಾ. ಎ.ಸಿ. ವಾಲಿ ಗುರೂಜಿಯವರು ಶಿವದರ್ಶನ ಪ್ರವಚನ ಹಾಗೂ ಯೋಗಗುರುಗಳಾದ ವಿನಾಯಕ ತಲಗೇರಿ ಯೋಗದರ್ಶನ ಮಾಡಿಸಿದರು. ಶಾಸ್ತ್ರಿಯ ಸಂಗೀತಗಾರರಾದ ಶ್ರೀ ಕೃಷ್ಣೆ್ನೕಂದ್ರ ವಾಡಿಕರ, ಸರಿಗಮಪ ಖ್ಯಾತಿಯ ಮೆಹಬೂಬಸಾಬ್ ನದಾಫ್, ಗಿಟಾರ ವಾದಕ ಸಂದೇಶ ಹುಟಗಿ, ಅಮೋಘ ಹಿರೇಮಠ ನೇತೃತ್ವದ ಮಲ್ಲಕಂಬ ಪ್ರದರ್ಶನ, ಅಜಿತ ಬಸಾಪುರ ನೇತೃತ್ವದ ಜೋಗತಿ ನೃತ್ಯಗಳು ನೆರೆದಿದ್ದ ಭಕ್ತರನ್ನು ಶಿವಭಕ್ತಿಯಲ್ಲಿ ಮಿಂದೇಳುವಂತೆ ಮಾಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net