ಸ್ವದೇಶಿ ವಸ್ತುಗಳಿಗೆ ಆದ್ಯತೆ ಕೊಡಿ

ರೈತ ಮುಖಂಡ ವೀರೇಶ್​ ಮನವಿ > ಭದ್ರಾವತಿ ತಾಲೂಕು ಸಾಹಿತ್ಯ ಸಮ್ಮೇಳನ ಸಮಾರೋಪ

Bhadravathi: Farmer movements are ongoing. Farmer leader D.V. Veeresh expressed his dismay, noting that despite past protests rejecting foreign goods, such items can still be found on every street in the town.
ಭದ್ರಾವತಿಯಲ್ಲಿ ಆಯೋಜಿಸಿದ್ದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದೀಪ್ತಿ ಶ್ರೀಹರ್ಷ, ಶಾರದಾ ಅಪ್ಪಾಜಿ, ಡಾ. ಕೃಷ್ಣ ಭಟ್​, ಡಿ.ಮಂಜುನಾಥ್​, ಎಚ್​.ತಿಮ್ಮಪ್ಪ, ಮಂಗೋಟೆ ರುದ್ರೇಶ್​ ಇದ್ದರು. Give priority to indigenous products.
Published on: 

ಭದ್ರಾವತಿ: ರೈತ ಚಳವಳಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ದುರಂತವೆಂದರೆ ವಿದೇಶಿ ವಸ್ತುಗಳು ಬೇಡವೆಂದು ನಿರಾಕರಿಸಿ ಈ ಹಿಂದೆ ಪ್ರತಿಭಟಿಸಿದ್ದರೂ ನಮ್ಮೂರಿನ ಬೀದಿಬೀದಿಯಲ್ಲಿ ಸಿಗುತ್ತಿವೆ ಎಂದು ರೈತ ಮುಖಂಡ ಡಿ.ವಿ.ವೀರೇಶ್​ ಬೇಸರ ವ್ಯಕ್ತಪಡಿಸಿದರು.

ನಗರದ ನ್ಯೂಟೌನ್​ ಶ್ರೀರಾಮ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಆಯೋಜಿಸಿದ್ದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ರೈತ, ಕಾರ್ಮಿಕ ಹಾಗೂ ದಲಿತ ಚಳವಳಿಯ ಅವಲೋಕನ ವಿಚಾರಗೋಷ್ಠಿಯಲ್ಲಿ ಮಾತನಾಡಿ, ವಿದೇಶಿ ವಸ್ತುಗಳ ರ್ತು ಹಾಗೂ ಆಮದು ನೀತಿ ಖಂಡಿಸಿ ರೈತರು ಹಿಂದೆ ಬೃಹತ್​ ಪ್ರತಿಭಟನೆ ನಡೆಸಿ ವಿದೇಶಿ ವಸ್ತುಗಳನ್ನು ದೇಶಕ್ಕೆ ಬಾರದಂತೆ ತಡೆ ಹಿಡಿಯಲಾಗಿತ್ತು. ಆದರೆ ಈಗ ವಿದೇಶಿ ಕುಲಾಂತರಿ ಸಸ್ಯ, ಬೀಜಗಳು ಬೀದಿ ಬದಿಯಲ್ಲಿ ಮಾರಾಟವಾಗುತ್ತಿವೆ ಎಂದರು.

ಭದ್ರಾ ಬಲದಂಡೆ ನಾಲೆಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಇಂದಿಗೂ ಪ್ರತಿಭಟನೆ, ಹೋರಾಟಗಳು ನಡೆಯುತ್ತಿವೆ. ಆದರೆ ಸರ್ಕಾರಗಳು ರೈತರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿಲ್ಲ. ರೈತರ ಸಮಸ್ಯೆಗಳಿಗೆ ಇಲ್ಲಿನ ದಲಿತ ಸಂಟನೆಗಳು, ಕಾರ್ಖಾನೆಯ ಕಾರ್ಮಿಕರು ಸಹ ಕೈಜೋಡಿಸಿದ್ದ ನಿದರ್ಶನಗಳನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ವಿಐಎಸ್​ಎಲ್​ ಕಾರ್ಮಿಕ ಸಂದ ಅಧ್ಯ ಅಮೃತ್​ಕುಮಾರ್​ ಮಾತನಾಡಿ, ಕಾರ್ಮಿಕರು ಹಕ್ಕುಗಳನ್ನು ಪಡೆಯಲು ನಡೆಸುತ್ತಿದ್ದ ಹೋರಾಟಗಳು ಕೇವಲ ಇಂದಿನದಲ್ಲ. 13ನೇ ಶತಮಾನದ ಬಸವಣ್ಣನವರ ಕಾಲದಿಂದಲೂ ನಡೆಯುತ್ತಿದೆ ಎಂದರು.

ದುಡಿಸಿಕೊಳ್ಳುವ ಮಾಲೀಕ ಇಲ್ಲವೇ ಸರ್ಕಾರ ದುಡಿಯುವ ಕೈಗಳಿಗೆ ರ್ನಿದಿಷ್ಟ ವೇತನ ಉದ್ಯೋಗ ಭರವಸೆ, ಮೂಲ ಸೌಕರ್ಯಗಳನ್ನು ನೀಡದ ಹಿನ್ನೆಲೆಯಲ್ಲಿ ಹಕ್ಕನ್ನು ಪಡೆಯುವ ಅನಿವಾರ್ಯವಾದಲ್ಲಿ ಹೋರಾಟಗಳು ನಿರಂತರವಾಗಿರುತ್ತವೆ. ವಿಐಎಸ್​ಎಲ್​ ಹಾಗೂ ಎಂಪಿಎಂ ಕಾರ್ಖಾನೆಗಳನ್ನು ಹೊಂದಿರುವ ಭದ್ರಾವತಿ ಕಾರ್ಮಿಕರ ನೆಲೆ ಎಂದು ತಿಳಿಸಿದರು.

ಡಿಎಸ್​ಎಸ್​ ಗೌರವಾಧ್ಯ ಸತ್ಯ ಭದ್ರಾವತಿ, ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿದ ದಲಿತ ಸಂರ್ಷ ಸಮಿತಿ ಅನೇಕ ಹೋರಾಟಗಳನ್ನು ಮಾಡುತ್ತಿದೆ. ಸರ್ಕಾರದ ಎಲ್ಲ ಸವಲತ್ತುಗಳು ಹಿಂದುಳಿದ ವರ್ಗಕ್ಕೆ ಸಿಕ್ಕಿದೆ ಎಂದರೆ ಅದು ಪ್ರೊ. ಬಿ.ಕೃಷ್ಣಪ್ಪ ಅವರ ಕೊಡುಗೆ ಎಂಬುದನ್ನು ಮರೆಯಬಾರದು ಎಂದರು.

ಕಾರ್ಯನಿರತ ಪತ್ರಕರ್ತರ ಸಂದ ತಾಲೂಕು ಅಧ್ಯ ಗಂಗಾನಾಯ್ಕಗೊಂದಿ, ಕಸಾಪ ತಾಲೂಕು ಅಧ್ಯ ಎಚ್​.ತಿಮ್ಮಪ್ಪ, ಎಂ.ಇ ಜಗದೀಶ್​ ಉಪಸ್ಥಿತರಿದ್ದರು.

ಬದುಕು ಹಾಗೂ ಕಾರ್ಖಾನೆ ಉಳಿವಿಗಾಗಿ ಚಳವಳಿಗಳು ಅನಿವಾರ್ಯವಾಗಿದೆ. ವಿಐಎಸ್​ಎಲ್​ ಉಳಿಸಿ ಹೋರಾಟ ಆರಂಭಗೊಂಡು 1318 ದಿನಗಳು ಕಳೆದಿವೆ. ಸರ್ಕಾರಗಳು ಈಗಲಾದರೂ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಿ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ನೀಡಬೇಕು.

> ಅಮೃತ್​ಕುಮಾರ್​

ಅನ್ಯಭಾಷಿಗರದೇ ಮೇಲುಗೈ

ನಾಡಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿರುವ ಭದ್ರಾವತಿ ಇಂದು ಎಲ್ಲ ಕ್ಷೇತ್ರಗಳಲ್ಲೂ ಮಂಕಾಗಿ ಶೋಚನೀಯ ಸ್ಥಿತಿ ತಲುಪುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಸಾಹಿತಿ ದೀಪ್ತಿ ಶ್ರೀಹರ್ಷ ಹೇಳಿದರು.

ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮ್ಮೇಳನಗಳು ಊರನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ ಎಂದರು.

ಜೆಡಿಎಸ್​ ರಾಜ್ಯ ಮಹಿಳಾ ಟಕದ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಮಾತನಾಡಿ, ಇತ್ತೀಚೆಗೆ ಕನ್ನಡಕ್ಕಾಗಿ ಕೆಲಸ ಮಾಡುವ ಕೈಗಳು ಕಡಿಮೆಯಾಗುತ್ತಿವೆ. ಬದಲಾಗಿ ಪರಿಷತ್ತಿನ ಕೆಲಸಗಳನ್ನು ಹಾಳುಮಾಡುವ ಮನಸ್ಸುಗಳೇ ಹೆಚ್ಚಾಗಿವೆ ಎಂದರು.

ಪರಿಷತ್ತಿನ ತಾಲೂಕು ಅಧ್ಯ ಎಚ್​.ತಿಮ್ಮಪ್ಪ ಮಾತನಾಡಿ, ಕಸಾಪ ಭವನ ನಿರ್ಮಾಣಕ್ಕೆ ದೇಣಿಗೆಯ ಅಗತ್ಯತೆ ಇದೆ. ಎಲ್ಲಾ ಕನ್ನಡಾಭಿಮಾನಿಗಳು ನೆರವಾಗುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್​, ಸಮ್ಮೇಳನದ ಸರ್ವಾಧ್ಯ ಡಾ.ಕೃಷ್ಣ ಎಸ್​ ಭಟ್​, ಜಿಲ್ಲಾಧ್ಯ ಡಿ.ಮಂಜುನಾಥ್​ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಇಂದು ಕನ್ನಡಿಗರಿಗಿಂತ ಅನ್ಯಭಾಷಿಗರದೇ ಮೇಲುಗೈ ಆಗಿದೆ. ಹೊರ ರಾಜ್ಯದವರಿಗೆ ಕನ್ನಡಿಗರು ತೋರಿಸಿದ ಹೆಚ್ಚಿನ ಔದಾರ್ಯ, ಪ್ರೀತಿ, ನಮ್ಮನ್ನು ಈ ಸ್ಥಿತಿಗೆ ತಂದಿದೆ. ಕನ್ನಡಿಗರಿಗೆ ಐಟಿಬಿಟಿಯಷ್ಟೇ ಅಲ್ಲ, ಸಣ್ಣ ಸಣ್ಣ ಕೆಲಸಗಳೂ ಸಹ ಸಿಗದಂತಾಗಿದೆ.

> ಶಾರದಾ ಅಪ್ಪಾಜಿ

ಜೆಡಿಎಸ್​ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ