ಸನ್ಮಾರ್ಗದಿಂದ ಸದೃಢ ಸಮಾಜ ನಿರ್ಮಾಣ Murugha Matha

Murugha Matha
ಸೊರಬದ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ವೀರಶೈವ ಸಂಘಟನಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸುರೇಂದ್ರ ಗೌಡ, ಪೂರ್ಣಿಮಾ, ರೇವತಿ, ಸುಧಾ, ಜಯಮಾಲ,  ಡಿ.ಶಿವಯೋಗಿ ಇತರರಿದ್ದರು.
ಸೊರಬದ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ವೀರಶೈವ ಸಂಘಟನಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸುರೇಂದ್ರ ಗೌಡ, ಪೂರ್ಣಿಮಾ, ರೇವತಿ, ಸುಧಾ, ಜಯಮಾಲ, ಡಿ.ಶಿವಯೋಗಿ ಇತರರಿದ್ದರು.
Published on: 

ಸೊರಬ: ಸಮಾಜ ಸಂಘಟನೆಗೆ ದೊಡ್ಡ ಶಕ್ತಿ ಇದೆ. ಎಲ್ಲರೂ ಸನ್ಮಾರ್ಗದಲ್ಲಿ ನಡೆದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಮತ್ತು ವೀರಶೈವ ಸಂಘಟನಾ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭೂಮಿ ತಾಯಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುವುದು ಭೂಮಿ ಹುಣ್ಣಿಮೆ ವಿಶೇಷ. ಮಠಗಳು ಸಮಾಜಮುಖಿ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವ ಪರಂಪರೆ ನಿರಂತರವಾಗಿ ಬೆಳೆದು ಬಂದಿದೆ ಎಂದರು.

ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್ ಮಾತನಾಡಿ, ಎಲ್ಲರೂ ಸಂಘಟಿತರಾಗಿ ಸಮಾಜವನ್ನು ಕಟ್ಟುವ ಕೆಲಸವಾಗಬೇಕು. ವೀರಶೈವ ಧರ್ಮದವರು ಭಿನ್ನಾಭಿಪ್ರಾಯ ಮರೆತು ಸಂಘಟಿತರಾಗಿ ಸಮಾಜದ ಏಳಿಗೆಗೆ ಶ್ರಮಿಸೋಣ ಎಂದರು.

ವೀರಶೈವ ಸಂಘಟನಾ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ವೀರಶೈವ ಸಂಘಟನಾ ವೇದಿಕೆ ಅಧ್ಯಕ್ಷ ಸಂತೋಷ್, ಸುರೇಂದ್ರ ಗೌಡ, ಪೂರ್ಣಿಮಾ ಶಿವಯೋಗಿ, ರೇವತಿ, ಸುಧಾ, ಜಯಮಾಲಾ, ಡಿ.ಶಿವಯೋಗಿ, ರಾಜು ಗೌಡ, ಮಲ್ಲಿಕಾರ್ಜುನ ಗೌಡ, ಹಾಲಪ್ಪ ಗೌಡ ಇತರರಿದ್ದರು