ಮರಾಠ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲಿ

ಮಾರಶೆಟ್ಟಿಹಳ್ಳಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಉದ್ಘಾಟಿಸಿದರು. ಮರಿಯೋಜಿ ರಾವ್, ಸಚಿನ್ ಸಿಂಧ್ಯಾ, ಸತೀಶ್, ಗೀತಾ, ರಾಮಚಂದ್ರ ರಾವ್ ಇತರರಿದ್ದರು.
ಮಾರಶೆಟ್ಟಿಹಳ್ಳಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಉದ್ಘಾಟಿಸಿದರು. ಮರಿಯೋಜಿ ರಾವ್, ಸಚಿನ್ ಸಿಂಧ್ಯಾ, ಸತೀಶ್, ಗೀತಾ, ರಾಮಚಂದ್ರ ರಾವ್ ಇತರರಿದ್ದರು.
Published on: 

ಹೊಳೆಹೊನ್ನೂರು: ಮರಾಠ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿ ಆಗಬೇಕಿದೆ ಎಂದು ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್ ಹೇಳಿದರು.

ಸಮೀಪದ ಮಾರಶೆಟ್ಟಿಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಮರಾಠ ಸಮಾಜದ ಮಹಿಳೆಯರಿಗೆ ನಿಗಮದಿಂದ ಉಚಿತವಾಗಿ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಬೇಕು. ಮರಾಠ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ 237 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದೆ. ಜಲಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 3,684 ಕೊಳವೆಬಾವಿ ಕೊರೆಸಲಾಗಿದೆ. ನಿಗಮಕ್ಕೆ ಈ ಬಾರಿ 14 ಸಾವಿರ ಅರ್ಜಿಗಳು ಬಂದಿರುವುದು ಆಶಾದಾಯಕ ಬೆಳವಣಿಗೆ. ನಿಗಮದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಮುಂದಿನ ಬಾರಿಗೆ 4 ಸಾವಿರ ಹೊಲಿಗೆ ಯಂತ್ರ ನೀಡಲು ಯೋಜಿಸಲಾಗಿದೆ ಎಂದರು.

ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡುವವರನ್ನು ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೊಲಿಗೆ ಕ್ಷೇತ್ರದಲ್ಲಿನ ವಿಪುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮಹಿಳೆಯರು ಜೀವನ ರೂಪಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕ್ಷತ್ರಿಯ ಮರಾಠ ಸಂಘದ ಅಧ್ಯಕ್ಷ ಸಚಿನ್ ಸಿಂಧ್ಯಾ, ಉಪಾಧ್ಯಕ್ಷ ಸತೀಶ್, ಪ್ರಮುಖರಾದ ಗೀತಾ, ಯಶ್ವಂತ ರಾವ್ ಘೋರ್ಪಡೆ, ರಾಮಚಂದ್ರ ರಾವ್, ಅಶೋಕ್ ರಾವ್, ಎಂ.ಬಿ. ಕವಿತಾ, ಚಂದ್ರೋಜಿ ರಾವ್, ಕೆ.ಎಲ್.ರಮೇಶ್, ಸುಧಾ ರಾವ್, ಪರುಶುರಾಮ್ ರಾವ್, ಮಂಜುನಾಥ್ ರಾವ್, ರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net