ಜಂಗಿ ಕುಸ್ತಿಯಲ್ಲಿ ವಿಶ್ವಜಿತ್‌ಗೆ ಬೆಳ್ಳಿ ಗದೆ Janghi Kushti

Janghi Kushti
 ದಸರಾ ಅಂಗವಾಗಿ ಸೊರಬ ಚಂದ್ರಗುತ್ತಿಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ.
ದಸರಾ ಅಂಗವಾಗಿ ಸೊರಬ ಚಂದ್ರಗುತ್ತಿಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ.
Published on: 

ಸೊರಬ: ಚಂದ್ರಗುತ್ತಿಯಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ಶ್ರೀ ರೇಣುಕಾಂಬ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಜಂಗಿ ಕುಸ್ತಿಯಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪೈಲ್ವಾನ್ ವಿಶ್ವಜಿತ್ ವಿಜೇತರಾಗಿ ಬೆಳ್ಳಿಗದೆ ತಮ್ಮದಾಗಿಸಿಕೊಂಡರು.

ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಸಾಂಸ್ಕೃತಿಕ ವೇದಿಕೆ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಚಂದ್ರಗುತ್ತಿ ದಸರಾ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಕುಸ್ತಿ ಆಯೋಜಿಸಲಾಗಿತ್ತು.

ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಸೊರಬ ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜ್ ಗೌಡ, ಗ್ರಾಮೀಣ ಸೊಗಡಿನ ಕುಸ್ತಿ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ಅವಶ್ಯಕ. ಇಂತಹ ಪಂದ್ಯಾವಳಿಗಳು ಯುವ ಜನತೆಯಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚಿಸುವುದಲ್ಲದೆ, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವ ಹಾಗೂ ಶಿಸ್ತನ್ನು ಕಲಿಸುತ್ತದೆ ಎಂದು ತಿಳಿಸಿದರು.

ಉತ್ತಮ ಪ್ರದರ್ಶನ ನೀಡಿದ ಇತರ ಪೈಲ್ವಾನರಿಗೆ ಬೆಳ್ಳಿ ಖಡ್ಗ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ದಸರಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಪಿ.ರತ್ನಾಕರ, ತಾಪಂ ಮಾಜಿ ಸದಸ್ಯ ಎನ್.ಜಿ. ನಾಗರಾಜ್, ಸುಧಾಕರ್ ಪಿ. ನಾಯ್ಕ, ಗಣೇಶ್ ಮರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net