ಹೊಳೆಹೊನ್ನೂರು: ಸಮೀಪದ ಇಟ್ಟಿಗೆಹಳ್ಳಿ ಗ್ರಾಮದ ಕೆಲ ಯುವಕರು ಮಂಗಳವಾರ ರಸ್ತೆ ಗುಂಡಿಗಳಿಗೆ ಮಣ್ಣು ಸುರಿದುಕೊಂಡು ತಾತ್ಕಾಲಿಕವಾಗಿ ತಾವೇ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.
ಭದ್ರಾವತಿ ತಾಲೂಕಿನ ಆನವೇರಿಯಿಂದ ಇಟ್ಟಿಗೆಹಳ್ಳಿಗೆ ಸಂಪರ್ಕ ಕಲ್ಪಿಸುವ 2.5 ಕಿ.ಮೀ. ಉದ್ದದ ರಸ್ತೆ ಬಹುತೇಕ ಕಡೆಗಳಲ್ಲಿ ಗುಂಡಿ ಬಿದ್ದು ಓಡಾಟಕ್ಕೆ ಕಷ್ಟವಾಗಿತ್ತು. ದುರಸ್ತಿ ಮಾಡುವಂತೆ ಹತ್ತಾರು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಗ್ರಾಮಸ್ಥರು ಟ್ರಾೃಕ್ಟರ್‌ನಲ್ಲಿ ಮಣ್ಣನ್ನು ತಂದು ಗುಂಡಿಗಳಿಗೆ ಸುರಿದು ಸಮಸ್ಯೆಯಿಂದ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ.