ಮಾನಿನಿಯರ ಕೈಯಲ್ಲಿ ಪ್ರಕೃತಿ ಸಿರಿಯ ಅನಾವರಣ | Painting competition

ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್  ಪ್ರಕೃತಿ ವಿಷಯ ಕುರಿತು ಮಹಿಳೆಯರಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಪ್ರಕೃತಿ ವಿಷಯ ಕುರಿತು ಮಹಿಳೆಯರಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿದರು.
Published on
ಶಿವಮೊಗ್ಗ: ಮಹಿಳೆಯರ ಚಿತ್ರಕಲೆಯಲ್ಲಿ ಪ್ರಕೃತಿ ಅನಾವರಣಗೊಳ್ಳುತ್ತಿರುವುದು ಸಂತಸದ ವಿಷಯ. ಇಂತಹ ಚಿತ್ರಕಲೆ ಸ್ಪರ್ಧೆಗಳು ಮಹಿಳೆಯರಲ್ಲಿ ಸುಪ್ತವಾಗಿ ಅಡಗಿರುವ ಕಲೆ, ಕೌಶಲಕ್ಕೆ ಉತ್ತಮ ವೇದಿಕೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಹೇಳಿದರು.
ಮಹಿಳಾ ದಿನಾಚರಣೆ(Women's Day) ಅಂಗವಾಗಿ ಭಾನುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಕೃತಿ ವಿಷಯ ಕುರಿತು ಮಹಿಳೆಯರಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ(Painting competition) ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರ ರಚನೆ ಕೇವಲ ಕಲೆ ಮಾತ್ರವಲ್ಲ. ಮನಸ್ಸಿಗೆ ನೆಮ್ಮದಿ ಮತ್ತು ಆನಂದ ನೀಡುವ ಮಾರ್ಗ. ಆದ್ದರಿಂದ ಆಸಕ್ತಿ ಉಳ್ಳವರು ಹೆಚ್ಚೆಚ್ಚು ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಪಡಿಸಬೇಕು ಎಂದರು.

ಪ್ರಕೃತಿ ಶೆಣೈ ಪ್ರಥಮ

ತೀರ್ಥಹಳ್ಳಿಯ ಪ್ರಕೃತಿ ಶೆಣೈ ಪ್ರಥಮ ಬಹುಮಾನ 8 ಸಾವಿರ ರೂ., ಭಾವನಾ ಹೊಳ್ಳ ದ್ವಿತೀಯ ಬಹುಮಾನ 6 ಸಾವಿರ ರೂ., ಆಶಾ ಉಮೇಶ್ ತೃತೀಯ ಬಹುಮಾನ 4 ಸಾವಿರ ರೂ. ಪಡೆದರು. ಶಿಕಾರಿಪುರದ ಹೇಮಲತಮ್ಮ, ಶಿವಮೊಗ್ಗದ ಆರ್.ಮನ್ವಿತಾ, ಆನವಟ್ಟಿಯ ಶಾಲಿನಿ ನಾಯಕ್ ಅವರಿಗೆ ಸಮಾಧಾನಕರ ಬಹುಮಾನ ತಲಾ 2 ಸಾವಿರ ರೂ. ಮತ್ತು ಶಿವಮೊಗ್ಗದ ಆರ್.ಕೆ.ಸೌಜನ್ಯಾ ಅವರು ವಿಶೇಷ ಬಹುಮಾನ ಪಡೆದರು. ವಿಜೇತರಿಗೆ ಮಾ.26ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. 74 ಅಭ್ಯರ್ಥಿಗಳು ಸ್ಪರ್ಧೆಗೆ ನೋಂದಣಿ(Registration) ಮಾಡಿಕೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net