ಕ್ಯಾಮೆರಾ ಮತ್ತು ಆಳವಾದ ಕಲಿಕಾ ಕ್ರಮಾವಳಿ ಬಳಸಿಕೊಂಡು ಸಂಕೇತ ಭಾಷೆಯನ್ನು, ಸ್ವಯಂಚಾಲಿತವಾಗಿ ಪತ್ತೆ ಹಚ್ಚಿ ವ್ಯಾಖ್ಯಾನಿಸಿ ಅಕ್ಷರದ ರೂಪದಲ್ಲಿ ತಿಳಿಸುವ, ಬ್ಲಾಕ್‌ಚೈನ್(Blockchain)ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಉತ್ಪನ್ನಗಳ ನೈಜತೆ ಕುರಿತಾಗಿ ಮಾರ್ಗದರ್ಶನ ನೀಡುವ, ಹೊಂದಾಣಿಕೆಯುಕ್ತ ಸ್ಟೆಗನೋಗ್ರಫಿ ತಂತ್ರಜ್ಞಾನ, ಸ್ಮಾರ್ಟ್(smart) ಐಒಟಿ-ಆಧಾರಿತ ಕೋಲ್ಡ್ ಸ್ಟೋರೇಜ್ ಮಾನಿಟರಿಂಗ್ ವ್ಯವಸ್ಥೆ, ಸೈಬರ್ ತಂತ್ರಜ್ಞಾನ ಬಳಸಿ ಸಾಮಾಜಿಕ ಮಾಧ್ಯಮದಲ್ಲಿನ ನಕಲಿ ಖಾತೆ ಪತ್ತೆ ಹಚ್ಚುವಂತಹ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳು ನಿರೂಪಿಸಿದರು.