ಕೆರೆಗಳ ಮಹತ್ವ ಅರಿತುಕೊಳ್ಳಿ

ಆಯನೂರು ಸಮೀಪ ಚಿಕ್ಕದಾನವಂದಿ ಗ್ರಾಮದಲ್ಲಿ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಎಸ್.ಎಸ್.ಅನಿಲ್‌ಕುಮಾರ್ ಉದ್ಘಾಟಿಸಿದರು. ಗೀತಾ, ಮುರಳೀಧರ್ ಶೆಟ್ಟಿ, ಉಮೇಶ್, ಮಂಜಪ್ಪ ಇತರರಿದ್ದರು.
ಆಯನೂರು ಸಮೀಪ ಚಿಕ್ಕದಾನವಂದಿ ಗ್ರಾಮದಲ್ಲಿ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಎಸ್.ಎಸ್.ಅನಿಲ್‌ಕುಮಾರ್ ಉದ್ಘಾಟಿಸಿದರು. ಗೀತಾ, ಮುರಳೀಧರ್ ಶೆಟ್ಟಿ, ಉಮೇಶ್, ಮಂಜಪ್ಪ ಇತರರಿದ್ದರು.
Published on
ಆಯನೂರು: ಕೆರೆಗಳ ಮಹತ್ವವನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಇಒ ಎಸ್.ಎಸ್.ಅನಿಲ್‌ಕುಮಾರ್ ಹೇಳಿದರು.
ಸಮೀಪದ ಚಿಕ್ಕದಾನವಂದಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚಿಕ್ಕದಾನವಂದಿ ದೊಡ್ಡ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಊರ ಮುಂದಿನ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಯೋಜನೆಯಿಂದ ಜನರಿಗೆ ಅನೇಕ ರೀತಿ ಅನುಕೂಲವಾಗಿದೆ. ಜಾನುವಾರುಗಳಿಗೂ ಉಪಯುಕ್ತ ಎಂದರು.
ಧರ್ಮಸ್ಥಳ ಸಂಘದಿಂದ 996ನೇ ಕೆರೆ ಅಭಿವೃದ್ಧಿ ಮಾಡಿ ಬಾಗಿನ ಅರ್ಪಿಸಿ ಹಸ್ತಾಂತರ ಮಾಡಲಾಯಿತು. ಗ್ರಾಮದ 14 ಎಕರೆ ಪ್ರದೇಶದಲ್ಲಿ ಕೆರೆ ಇದೆ. ದೀಪಕ್ ಪೂರ‌್ಯಾನಾಯ್ಕಾ ಕೆರೆ ನಾಮಫಲಕ ಅನಾವರಣಗೊಳಿಸಿದರು.
ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಗೀತಾ, ಶಿವಮೊಗ್ಗ ಜಿಲ್ಲಾ ನಿರ್ದೇಶಕ ಮುರಳೀಧರ್ ಶೆಟ್ಟಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ಮಂಜಪ್ಪ, ನವೀನ್, ಬಾಲಕೃಷ್ಣ, ಹರೀಶ್, ಉಲ್ಲಾಸ್ ಮೇಸ್ತಾ, ರಾಘವೇಂದ್ರ, ವಿನೋದಾ, ಶ್ರೀಕಾಂತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net