ಉಗ್ರಪ್ಪಗೆ ಭೋವಿ ಸಮಾಜದ ಮುಖಂಡರ ಘೇರಾವ್ Gherao

ಶಿವಮೊಗ್ಗ: ನಗರಕ್ಕೆ ಭೇಟಿ ನೀಡಿದ್ದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಕಾರಿಗೆ ಭೋವಿ ಸಮಾಜದ ಮುಖಂಡರು ಘೇರಾವ್ ಹಾಕಿದರು.
Gherao
ಆರ್‌ಟಿಒ ರಸ್ತೆಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರಿಗೆ ಭೋವಿ ಸಮುದಾಯದ ಮುಖಂಡರು ಘೇರಾವ್ ಹಾಕಿದರು. ವೀರಭದ್ರಪ್ಪ ಪೂಜಾರ್, ಬೂದಿಗೆರೆ ಬಸವರಾಜ್ ಮತ್ತಿತರರಿದ್ದರು.
Published on: 

ಶಿವಮೊಗ್ಗ: ನಗರಕ್ಕೆ ಭೇಟಿ ನೀಡಿದ್ದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಕಾರಿಗೆ ಭೋವಿ ಸಮಾಜದ ಮುಖಂಡರು ಘೇರಾವ್ ಹಾಕಿದರು.

ನಗರದ ಆರ್‌ಟಿಒ ರಸ್ತೆಯಲ್ಲಿ ತೆರಳುತ್ತಿದ್ದ ಉಗ್ರಪ್ಪ ಅವರನ್ನು ವೀರಭದ್ರಪ್ಪ ಪೂಜಾರ್ ಮತ್ತು ಬೂದಿಗೆರೆ ಬಸವರಾಜ್ ನೇತೃತ್ವದಲ್ಲಿ ಭೋವಿ ಸಮುದಾಯದ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಎಸ್‌ಟಿ ಮೀಸಲಾತಿ ಹಾಗೂ ಸಮಾಜದ ಮೂಲ ಸ್ಥಾನಮಾನಕ್ಕೆ ಸಂಬಂಧಿಸಿ ಮಾಜಿ ಸಂಸದರು ನೀಡಿರುವ ಹೇಳಿಕೆಗಳು ಸಮುದಾಯದ ಹಿತಾಸಕ್ತಿಗೆ ಧಕ್ಕೆ ತರುತ್ತಿವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದ ಆರ್‌ಟಿಒ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪರಿಸ್ಥಿತಿ ಹತೋಟಿಗೆ ತಂದರು.

ಇಂದಿನ ಕೆಆರ್‌ಎಸ್ ಅಣೆಕಟ್ಟು, ವಾಣಿವಿಲಾಸ ಜಲಾಶಯ, ಹೊಸಪೇಟೆ ಹಾಗೂ ತುಂಗಭದ್ರಾ ಡ್ಯಾಮ್‌ಗಳು, ವಿಧಾನಸೌಧ ಮತ್ತು ಸಂಸತ್ ಭವನದ ನಿರ್ಮಾಣದ ಹಿಂದೆ ನಮ್ಮ ಸಮುದಾಯದ ಶ್ರಮವಿದೆ. ಆದರೆ ಉಗ್ರಪ್ಪ ಅವರು ಸಮಾಜದ ಬಗ್ಗೆ ತಪ್ಪಾದ ಮತ್ತು ಗೊಂದಲಮಯ ಮಾಹಿತಿ ಹರಡುತ್ತಿದ್ದಾರೆ ಎಂದು ಮುಖಂಡ ವೀರಭದ್ರಪ್ಪ ಪೂಜಾರ್ ಕಿಡಿಕಾರಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ನಮ್ಮ ಸಮಾಜಕ್ಕೆ ಸಿಕ್ಕಿರುವ ಐತಿಹಾಸಿಕ ಹಿನ್ನೆಲೆ ಹಾಗೂ 1956ರ ಸಾಂವಿಧಾನಿಕ ಮೀಸಲಾತಿ ಸೌಲಭ್ಯಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ. ಇದೇ ರೀತಿ ಸಮುದಾಯದ ವಿರೋಧಿ ಧೋರಣೆ ಮುಂದುವರಿಸಿದರೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.