ಖಾಸಗಿ ವಿಡಿಯೋ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಇಬ್ಬರ ಬಂಧನ | Cyber crime

ಶಿವಮೊಗ್ಗ ಸೈಬರ್ ಠಾಣೆ
ಶಿವಮೊಗ್ಗ ಸೈಬರ್ ಠಾಣೆ
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ ಸೈಬರ್ ಠಾಣೆ ಪೊಲೀಸರು
  • ಖಾಸಗಿ ವಿಡಿಯೋ ಪೋಸ್ಟ್ ಮಾಡಿದ್ದಾರೆ ಎಂದು ಸೈಬರ್ ಠಾಣೆಗೆ ದೂರು
  • ಆರೋಪಿಗಳನ್ನು ಪತ್ತೆ ಮಾಡಿದ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ
ಶಿವಮೊಗ್ಗ: ಖಾಸಗಿ ವಿಡಿಯೋ(Private video)ವನ್ನು ಫೇಸ್‌ಬುಕ್‌ನ ನಕಲಿ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಇಬ್ಬರನ್ನು ಸೈಬರ್ ಠಾಣೆ(Cyber ​​​​station) ಪೊಲೀಸರು ಬಂಧಿಸಿದ್ದಾರೆ.
ಹೊಸನಗರ ತಾಲೂಕಿನ ಸೀಮ ಜೂಲಿಯನ್ ಸೆರಾವೋ(45) ಮತ್ತು ಬೆಂಗಳೂರು ದಾಸನಪುರದ ಹುಸ್ಕೂರು ಮುಖ್ಯ ರಸ್ತೆಯಲ್ಲಿರುವ ಟಾಟಾ ನ್ಯೂ ಹೆವನ್ ಅಪಾರ್ಟ್‌ಮೆಂಟ್ ನಿವಾಸಿ ಸಿ.ಜೆ.ನಿಶಾಂತ್ (29) ಬಂಧಿತರು.
ಕಳೆದ ಫೆ.5ರಂದು ದೂರುದಾರರೊಬ್ಬರು ತಮ್ಮ ಖಾಸಗಿ ವಿಡಿಯೋವನ್ನು ಅಪರಿಚಿತರು ಫೇಸ್‌ಬುಕ್‌(Facebook)ನ ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಶಿವಮೊಗ್ಗದ ಸೈಬರ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಸೈಬರ್ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನ(Judicial custody)ಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ಕ್ರಮಕೈಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net