ಸುರಂಗ ಮಾರ್ಗದಿಂದ ಹೆದ್ದಾರಿಗೆ ಒತ್ತಡ ಕಡಿಮೆ Tunnel

ಎಂಎಡಿಬಿ ಆರ್ಥಿಕ ನೆರವಿನೊಂದಿಗೆ ತೀರ್ಥಹಳ್ಳಿ ಆಗುಂಬೆ ವೃತ್ತದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಶಾಸಕ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. ಆರ್.ಎಂ.ಮಂಜುನಾಥ ಗೌಡ, ರತ್ನಾಕರ ಶೆಟ್ಟಿ, ಗೀತಾ ರಮೇಶ್ ಇತರರಿದ್ದರು.
ಎಂಎಡಿಬಿ ಆರ್ಥಿಕ ನೆರವಿನೊಂದಿಗೆ ತೀರ್ಥಹಳ್ಳಿ ಆಗುಂಬೆ ವೃತ್ತದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಶಾಸಕ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. ಆರ್.ಎಂ.ಮಂಜುನಾಥ ಗೌಡ, ರತ್ನಾಕರ ಶೆಟ್ಟಿ, ಗೀತಾ ರಮೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ
  • ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ
ತೀರ್ಥಹಳ್ಳಿ: ಆಗುಂಬೆ ಘಾಟ್ ರಸ್ತೆ ಸೇರಿ ತಾಲೂಕಿನ ರಸ್ತೆ ಸಂಪರ್ಕ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ 15 ಲಕ್ಷ ರೂ. ನೆರವಿನೊಂದಿಗೆ ಪಟ್ಟಣದ ಆಗುಂಬೆ ವೃತ್ತದಲ್ಲಿ ನಿರ್ಮಾಣ ಆಗಲಿರುವ ಪ್ರಯಾಣಿಕರ ತಂಗುದಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿಯಾಗಿರುವ ಆಗುಂಬೆ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ಅನಿವಾರ್ಯವಾಗಿದೆ. ಇದಕ್ಕೆ ಡಿಪಿಆರ್ ಕೂಡ ಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪಟ್ಟಣದಲ್ಲಿ ವಾಹನಗಳ ಒತ್ತಡ ಕಡಿಮೆ ಮಾಡುವ ಸಲುವಾಗಿ ಭಾರತೀಪುರದಿಂದ ರಂಜದಕಟ್ಟೆ ತಲುಪುವಂತೆ 170 ಕೋಟಿ ರೂ. ವೆಚ್ಚದಲ್ಲಿ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸಲಾಗಿದೆ. ಕಾಮಗಾರಿಗೆ ಈಗಾಗಲೇ 8 ಕೋಟಿ ರೂ. ಮಂಜೂರಾಗಿ ಕಾಮಗಾರಿ ಆರಂಭವಾಗಿದೆ ಎಂದರು.

ಪಟ್ಟಣದ ಕುವೆಂಪು ವೃತ್ತದಿಂದ ನೆಲ್ಲಿಸರ ಕ್ಯಾಂಪ್‌ವರೆಗಿನ ಹೆದ್ದಾರಿ ವಿಸ್ತರಣೆ 540 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಇದರಿಂದ ತೀರ್ಥಹಳ್ಳಿ-ಶಿವಮೊಗ್ಗ ನಡುವೆ 5 ಕಿ.ಮೀ ಉಳಿತಾಯವಾಗಲಿದೆ. ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಆಯನೂರಿನಿಂದ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆರಗ ಜ್ಞಾನೇಂದ್ರಶಾಸಕ

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪಟ್ಟಣದ ಅಗತ್ಯಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಂಗುದಾಣ ನಿರ್ಮಿಸಲಾಗುತ್ತಿದೆ ಎಂದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಸಂದೇಶ್ ಜವಳಿ, ರಹಮತ್ ಉಲ್ಲಾ ಅಸಾದಿ, ಸೊಪ್ಪುಗುಡ್ಡೆ ರಾಘವೇಂದ್ರ, ಬಿ.ಆರ್.ರಾಘವೇಂದ್ರ ಶೆಟ್ಟಿ, ಜ್ಯೋತಿ ಮೋಹನ್, ಶಬನಂ, ಯತಿರಾಜ್, ಮಂಜುಳಾ ನಾಗೇಂದ್ರ, ಸುಶೀಲಾ ಶೆಟ್ಟಿ ಹಾಗೂ ನಾಗರಾಜ ಪೂಜಾರಿ, ಎಚ್.ಎನ್.ವಿಜಯದೇವ್, ಡಿ.ನಾಗರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net