ಶಿವಮೊಗ್ಗದಲ್ಲಿ ಮೂರು ಮಹತ್ವದ ಕೃತಿಗಳ ಬಿಡುಗಡೆ I three books relese

ಎಂ.ಸುರೇಶ್, ಶಿವಮೊಗ್ಗ ರಾಷ್ಟ್ರೋತ್ಥಾನ ಬಳಗದ ಸಂಚಾಲಕ
ಎಂ.ಸುರೇಶ್, ಶಿವಮೊಗ್ಗ ರಾಷ್ಟ್ರೋತ್ಥಾನ ಬಳಗದ ಸಂಚಾಲಕ
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೋತ್ಥಾನದಿಂದ ಕಾರ್ಯಕ್ರಮ ಆಯೋಜನೆ
  • ಮೈ.ಚ.ಜಯದೇವ ಅವರ ಜೀವನ ಚರಿತ್ರೆ ಅನಾವರಣ
  • ಕರ್ನಾಟಕ ಸಂಘದಲ್ಲಿ ನಡೆಯಲಿರುವ ಸಮಾರಂಭ
ಶಿವಮೊಗ್ಗ: ರಾಷ್ಟ್ರೋತ್ಥಾನ (rastrottana) ಪರಿಷತ್ ಹಾಗೂ ರಾಷ್ಟ್ರೋತ್ಥಾನ ಶಿವಮೊಗ್ಗ (shivamogga) ಬಳಗದಿಂದ ನಗರದ ಕರ್ನಾಟಕ ಸಂಘದಲ್ಲಿ ಆ.13ರ ಸಂಜೆ 6ಕ್ಕೆ ಮೂರು ಕೃತಿಗಳ (books) ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಬಳಗದ ಸಂಚಾಲಕ ಎಂ.ಸುರೇಶ್ ತಿಳಿಸಿದ್ದಾರೆ.
ಆರ್‌ಎಸ್‌ಎಸ್‌ನ ಜ್ಯೇಷ್ಠ ಪ್ರಚಾರಕ ಮೈ.ಚ.ಜಯದೇವ ಅವರ ಜೀವನ ಚರಿತ್ರೆ ‘ಅವಿಶ್ರಾಂತ ಧ್ಯೇಯಜೀವಿ’, ಎಸ್.ಆರ್.ರಾಮಸ್ವಾಮಿ ಅವರ ‘ಇತಿಹಾಸದ ಸೆರಗು’ ಹಾಗೂ ಪತ್ರಕರ್ತ ದು.ಗು.ಲಕ್ಷ್ಮಣ ಅವರ ಕ್ರಾಂತಿಕಾರಿ ಕಿಡಿಗಳು ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈ.ಚ.ಜಯದೇವ ಹಾಗೂ ಎಸ್.ಆರ್.ರಾಮಸ್ವಾಮಿ ಅವರ ಸಾಮಾಜಿಕ ಕಳಕಳಿ, ಬದ್ಧತೆ ಸಮರ್ಪಣಾ ಮನೋಭಾವ, ಸಂಘ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ಆರ್‌ಎಸ್‌ಎಸ್‌ನ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹಾಗೂ ಬೆಂಗಳೂರು ನೃಪತುಂಗ ವಿವಿಯ ಸಂಸ್ಥಾಪಕ ಕುಲಪತಿ ಶ್ರೀನಿವಾಸ ಬಳ್ಳಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ, ಪತ್ರಕರ್ತ ದು.ಗು.ಲಕ್ಷ್ಮಣ ಉಪಸ್ಥಿತರಿರುತ್ತಾರೆ. ಶಿವಮೊಗ್ಗ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ.ಸುಧೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬಳಗದ ಪ್ರಮುಖರಾದ ಮಂಜುನಾಥ್ ಕಸೆಟ್ಟಿ, ನಿತಿನ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net