

ಪ್ರಮುಖ ಮುಖ್ಯಾಂಶಗಳು
ಶಿವಮೊಗ್ಗ ವಿಭಾಗದ ನಾಲ್ಕು ಡಿಪೋಗಳ ವ್ಯಾಪ್ತಿಯಲ್ಲಿ 363 ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಇಲ್ಲ. ಅದರಲ್ಲಿ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಜಾಲವಿಲ್ಲ. ಶಕ್ತಿ ಯೋಜನೆ ಬಳಿಕ ಸಾಕಷ್ಟು ಗ್ರಾಮಗಳಿಗೆ ಬಸ್ ಓಡಿಸುವಂತೆ ಬೇಡಿಕೆ ಬರುತ್ತಿದೆ. ಸಂಪರ್ಕ ಜಾಲ ನೋಡಿಕೊಂಡು ತೀರ್ಮಾನಿಸಲಾಗುವುದು.