ವಿಮಾನಗಳು ರಾತ್ರಿ ವೇಳೆ, ಪ್ರತಿಕೂಲ ಹವಾಮಾನದಲ್ಲೂ ಕಾರ್ಯಾಚರಣೆ ಮಾಡಲು ಅನುಕೂಲವಾಗುವಂತೆ ವಿಒಆರ್(ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್) ಹಾಗೂ ಡಿಎಂಇ(ಡೈರೆಕ್ಷನ್ ಮೆಷರ್‌ಮೆಂಟ್ ಎಕ್ವಿಪ್‌ಮೆಂಟ್) ಉಪಕರಣಗಳ ಅಳವಡಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದಕ್ಕೆ ಸಂಬಂಧಿಸಿ ರನ್‌ವೇ ಸಮೀಪದ ಎಟಿಸಿ(ಏರ್ ಟ್ರಾಫಿಕ್ ಕಂಟ್ರೋಲ್) ಕಟ್ಟಡದ ಬಳಿಯ ಮಣ್ಣನ್ನು ಪರೀಕ್ಷೆಗೆ ಕಳುಹಿಸಿದ್ದು, ಉಪಕರಣ ಅಳವಡಿಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವರದಿ ಬಂದಿದೆ.