ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ಸಂಬಂಧಿಸಿದ ಮಸೂದೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಜಿಲ್ಲಾ ನಿವೃತ್ತ ನೌಕರರ ಸಂಘದ ಕೆ.ಆರ್.ರವೀಂದ್ರ, ನಾಗಪತಿ ವಿ.ಭಟ್, ಚಂದ್ರಪ್ಪ ಮುಂತಾದವರು ಪ್ರತಿಭಟನೆ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸೌಲಭ್ಯ ಕಳೆದುಕೊಳ್ಳುವ ಭೀತಿ
ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ
ಶಿವಮೊಗ್ಗ: ಕೇಂದ್ರ ಸರ್ಕಾರವು ಅಖಿಲ ಭಾರತ (bharata) ಪಿಂಚಣಿದಾರರ ಒಕ್ಕೂಟದ ಪ್ರಾತಿನಿಧ್ಯ- 2025 ಮಸೂದೆ ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ನಿವೃತ್ತ (retired) ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಿದರು.
ಭಾರತದ ಏಕೀಕೃತ ನಿಧಿಯಿಂದ ಪಿಂಚಣಿ ಹೊಣೆಗಾರಿಕೆಗಳ ಮೇಲಿನ ವೆಚ್ಚಕ್ಕಾಗಿ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು ಮತ್ತು ತತ್ವಗಳ ಊರ್ಜಿತಗೊಳಿಸುವಿಕೆಯ ಹೊಸ ಮಸೂದೆ ನಿವೃತ್ತರಿಗೆ ಆಘಾತಕಾರಿಯಾಗಿದೆ. ಕೇಂದ್ರ ಸರ್ಕಾರವು ಪಿಂಚಣಿದಾರರನ್ನು ವರ್ಗೀಕರಿಸಲು ಮತ್ತು ಪಿಂಚಣಿದಾರರ ನಡುವೆ ವ್ಯತ್ಯಾಸವನ್ನು ಕಾಯ್ದುಕೊಳ್ಳಲು ಅಧಿಕಾರ ಹೊಂದಿದೆ ಎಂಬ ತತ್ವವನ್ನು ಊರ್ಜಿತಗೊಳಿಸುವ ಮಸೂದೆ ಅಂಗೀಕರಿಸಿರುವುದು ಆಘಾತಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಅಧಿವೇಶನದಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದು ಕಾಯ್ದೆಯಾದರೆ ಪಿಂಚಣಿದಾರರ ನಿವೃತ್ತಿಯ ದಿನಾಂಕವು ಪಿಂಚಣಿ ಅರ್ಹತೆಗೆ ಸಂಬಂಧಿಸಿ ವ್ಯತ್ಯಾಸಗಳು ಮತ್ತು ವರ್ಗೀಕರಣದ ಆಧಾರವಾಗಿರುತ್ತದೆ. ಇದರಿಂದ ಕೇಂದ್ರ ವೇತನ ಆಯೋಗದ ಕಾರ್ಯಾಚರಣೆಯ ಅವಧಿಗೆ ಮೊದಲು ಅಸ್ತಿತ್ವದಲ್ಲಿರುವ ಪಿಂಚಣಿದಾರರು ವೇತನ ಆಯೋಗದ ಶಿಫಾರಸುಗಳ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಮುಖರಾದ ನಾಗಪತಿ ವಿ. ಭಟ್, ಕೆ.ಆರ್.ರವೀಂದ್ರ, ಚಂದ್ರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.