ಆಚರಣೆಗಳನ್ನು ಅಲ್ಲಗಳೆಯುವ ಮನಸ್ಥಿತಿ ಸಲ್ಲ

ರಿಪ್ಪನ್​ಪೇಟೆ: ಪುರಾತನ ಆಚಾರ, ವಿಚಾರಗಳು ಭಾರತೀಯ ಸಂಸತಿಯ ಬಹುಮುಖ್ಯ ಭಾಗ ಎಂದು ಬಟ್ಟೆಮಲ್ಲಪ್ಪದ ಶ್ರೀವ್ಯಾಸ ಮಹರ್ಷಿ ಗುರುಕುಲ ಆಶ್ರಮದ ಶ್ರೀ ಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
krishna janmastami
ಕೊಡೂರಿನಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಲೀಲಾ ವೈಭವ ಸ್ಪರ್ಧೆಯನ್ನು ಶ್ರೀ ಕುಮಾರ ಸ್ವಾಮೀಜಿ ಉದ್ಥಾಟಿಸಿದರು. ಡಾ. ಸುಮಂತ್​ ಕೋಹಿಮಾ, ಜಗದೀಶ್​ ಸಂಪಳ್ಳಿ, ಎಂ.ಎಸ್​.ಪಾಟೀಲ್​, ಮಹೇಶ್​ ಇತರರಿದ್ದರು.
Published on: 

ರಿಪ್ಪನ್​ಪೇಟೆ: ಪುರಾತನ ಆಚಾರ, ವಿಚಾರಗಳು ಭಾರತೀಯ ಸಂಸತಿಯ ಬಹುಮುಖ್ಯ ಭಾಗ ಎಂದು ಬಟ್ಟೆಮಲ್ಲಪ್ಪದ ಶ್ರೀವ್ಯಾಸ ಮಹರ್ಷಿ ಗುರುಕುಲ ಆಶ್ರಮದ ಶ್ರೀ ಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಡೂರಿನಲ್ಲಿ, ಬ್ಲಾಸಂ ಅಕಾಡೆಮಿ, ಶ್ರೀವ್ಯಾಸ ಮಹರ್ಷಿ ಗುರುಕುಲಾಶ್ರಮ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಲೀಲಾ ವೈಭವ ಮಕ್ಕಳ ಕೃಷ್ಣವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

ಇಂದು ಆಧುನಿಕತೆ ಹೆಸರಿನಲ್ಲಿ ಪುರಾತನ ಆಚರಣೆ ಹಾಗೂ ನಮ್ಮ ಹಬ್ಬಗಳನ್ನು ಅಲ್ಲಗಳೆಯುವ ಮಾನಸಿಕತೆ ಇಂದಿನ ಯುವ ಜನತೆಯಲ್ಲಿ ಹೆಚ್ಚುತ್ತಿದೆ. ಪಾಲಕರ ಮನಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಇದರಿಂದಾಗಿ ನಮ್ಮ ಮಕ್ಕಳಿಗೆ ಸಂಸ್ಕಾರ, ಸಂಸತಿ ಕಲಿಸಲು ಸಾಧ್ಯವಾಗುತ್ತಿಲ್ಲ ಎಂದರು.

ವಿಶೇಷವಾಗಿ ಭಾರತದಲ್ಲಿ ಋಷಿ ಪರಂಪರೆಯಿಂದ ಆರಂಭಗೊಂಡು, ಪುರಾಣ ಪುಣ್ಯ ಕಥೆಗಳ ಮೂಲಕ ಹೇಳಲ್ಪಟ್ಟ ವಿಚಾರಗಳು ವಿಜ್ಞಾನದಲ್ಲಿಯೂ ಕೂಡ ಸಿಂಧುಗೊಂಡಿವೆ. ಆದರೂ ನಾವು ಅವುಗಳನ್ನ ಪ್ರಶ್ನಿಸಿಕೊಂಡು, ಅಲ್ಲಗಳೆಯುತ್ತ ಮುನ್ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಡಾ. ಸುಮಂತ್​ ಕೋಹಿಮಾ, ಬ್ಯಾಡಗಿಯ ಎಂ.ಎಸ್​.ಪಾಟೀಲ್​, ಉದ್ಯಮಿ ಮಹೇಶ್​, ಎ.ಆರ್​. ಗಣಪತಿ ಭಟ್​, ಉಷಾರಾಣಿ, ಪತ್ರಕರ್ತ ಜಗದೀಶ್​ ಸಂಪಳ್ಳಿ, ಅಶ್ವಿನಿ ಪಂಡಿತ್​, ಸಂಗೀತ ಗುರು, ಮಾಧುರಿ ದೇವಾನಂದ್​, ಕಲಾವಿದ ನೀಲ್​, ಮಂಜುನಾಥ್​ ಬ್ಯಾಣದ್​, ಉಪ ಪ್ರಾಚಾರ್ಯ ಪ್ರಕಾಶ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net