ಲೋಕ ಬೆಳಗುವುದೇ ಶ್ರೇಷ್ಠ ಧರ್ಮ । Daivajna Brahmin

ಶಿವಮೊಗ್ಗ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶಿರಸಿ ಸೋಂದಾ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಶಿವಮೊಗ್ಗ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶಿರಸಿ ಸೋಂದಾ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮ ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಇಡೀ ಸಮಾಜಕ್ಕೆ ಸಂಬಂಧಿಸಿದ್ದಾಗಿದೆ
  • ಧರ್ಮಗಳಿಗೆ ಆಹ್ವಾನ ನೀಡಲಾಗುತ್ತಿದೆ. ಸ್ಥಿರತೆ ಎಲ್ಲಿರುತ್ತದೋ ಅದುವೇ ಶ್ರೇಷ್ಠ ಧರ್ಮ
  • ಶಿರಸಿಯ ಸೋಂದಾ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಆಶೀರ್ವಚನ
ಶಿವಮೊಗ್ಗ: ಧರ್ಮ(Religion) ಎಂಬುದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಅದು ಇಡೀ ಸಮಾಜಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಎಲ್ಲರೂ ಧರ್ಮದ ಪಾಲನೆ ಜತೆಗೆ ರಕ್ಷಣೆಯನ್ನೂ ಮಾಡಬೇಕಿದೆ ಎಂದು ಶಿರಸಿಯ ಸೋಂದಾ ವಾದಿರಾಜ ಮಠ(Vadiraja matt)ದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಭಾನುವಾರ ದೈವಜ್ಞ ಬ್ರಾಹ್ಮಣ(Daivajna Brahmina)ಧರ್ಮ, ವಿಶ್ವವಲ್ಲಭ ತೀರ್ಥ ಶ್ರೀಪಾದರು , ದೈವಜ್ಞ ಶ್ರೀ ವಾದಿರಾಜ ಶಿಷ್ಯ ವೃಂದದಿಂದ ಸಾಮೂಹಿಕ ಪಾದಪೂಜೆ(Paada puja) ಹಾಗೂ ಫಲ ಮಂತ್ರಾಕ್ಷತೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮ ಪಾಲನೆ ಅತಿ ಮುಖ್ಯವಾಗಿದೆ. ನಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಧರ್ಮವನ್ನು ಪಾಲಿಸಬೇಕಿದೆ ಎಂದರು.
ಸಮಾಜದಲ್ಲಿಂದು ಧರ್ಮಕ್ಕೆ ಉಪದೇಶ ಮಾಡಲಾಗುತ್ತಿದ್ದು, ತಮ್ಮ ತಮ್ಮ ಧರ್ಮಗಳಿಗೆ ಆಹ್ವಾನ (Invitation) ನೀಡಲಾಗುತ್ತಿದೆ. ಎಲ್ಲಿ ಸ್ಥಿರತೆ ಇರುತ್ತದೋ ಅದುವೇ ನಿಜವಾದ ಶ್ರೇಷ್ಠ ಧರ್ಮ. ಲೋಕವನ್ನು ಬೆಳಗುವುದೇ ಶ್ರೇಷ್ಠ ಧರ್ಮವಾಗಿದೆ. ಅಜ್ಞಾನವನ್ನು ದೂರ ಮಾಡುವುದು, ಮಾನವೀಯ ಮಾರ್ಗದಲ್ಲಿ ನಡೆಯುವುದು, ಎಲ್ಲರನ್ನೂ ಪ್ರೀತಿಸುವುದೇ ಶ್ರೇಷ್ಠ ಧರ್ಮ ಎಂದು ಹೇಳಿದರು.
ನಮ್ಮತನವನ್ನು ಕಳೆದುಕೊಳ್ಳದೆ ಉಳಿಸಿಕೊಂಡು ಮುನ್ನಡೆಯಬೇಕು. ಆಧುನಿಕ ಗಾಳಿ ಎಷ್ಟೇ ಬೀಸಿದರೂ ಅದಕ್ಕೆ ತೂರಿಕೊಂಡು ಹೋಗುವಂತಾಗಬಾರದು. ಎಲ್ಲವನ್ನು ಧನಾತ್ಮಕವಾಗಿ ಸ್ವೀಕಾರ ಮಾಡುವುದು ಸಜ್ಜನರ ಗುಣವಾಗಿದೆ. ಅಂತಹ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ವಾದಿರಾಜ ಶಿಷ್ಯ ವೃಂದದ ಪ್ರಮುಖರಾದ ಓಂಗಣೇಶ್ ಶೇಟ್, ಸತೀಶ್ ಮೌಲ್ಡಿಂಗ್, ಸತೀಶ್ ಹಯಗ್ರೀವ, ಸತೀತ್ ವೈಭವ್, ಆರ್.ಸತೀಶ್, ಪ್ರದೀಪ, ಕೇಶವ ಶೇಟ್, ಪ್ರಶಾಂತ್, ಮಂಜುನಾಥ ರಾಯ್ಕರ್, ರಾಘವೇಂದ್ರ ಶೇಟ್, ನಾಗರಾಜ್, ಸುಹಾಸ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net