ಪ್ರಸ್ತುತ ಸಂಕಷ್ಟದಲ್ಲಿದೆ ಕುಶಲಕಲೆ

ಸಾಗರದಲ್ಲಿ ಏರ್ಪಡಿಸಿದ್ದ ಮೈಸೂರು ಗುಡಿಗಾರರ ಸಹಕಾರ ಸಂದ ಸರ್ವಸದಸ್ಯರ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಲೋಕೇಶ್​ಕುಮಾರ್​, ಎಸ್​.ಆರ್​.ಪ್ರಭಾಕರ್​, ವಿನಾಯಕ, ನಾಗರಾಜ್​ ಇತರರಿದ್ದರು.
ಸಾಗರದಲ್ಲಿ ಏರ್ಪಡಿಸಿದ್ದ ಮೈಸೂರು ಗುಡಿಗಾರರ ಸಹಕಾರ ಸಂದ ಸರ್ವಸದಸ್ಯರ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಲೋಕೇಶ್​ಕುಮಾರ್​, ಎಸ್​.ಆರ್​.ಪ್ರಭಾಕರ್​, ವಿನಾಯಕ, ನಾಗರಾಜ್​ ಇತರರಿದ್ದರು.
Published on
ಸಾಗರ: ಪ್ರಸ್ತುತ ಕುಶಲಕಲೆ ಸಂಕಷ್ಟದಲ್ಲಿದ್ದು, ಹಿರಿಯರು ಸಂಸ್ಥೆ ಕಟ್ಟಿದ ಉದ್ದೇಶ ಈಡೇರುತ್ತಿಲ್ಲ ಎಂದು ಮೈಸೂರು ಗುಡಿಗಾರರ ಸಹಕಾರ ಸಂದ ಅಧ್ಯ ಲೋಕೇಶ್​ ಕುಮಾರ್​ ಹೇಳಿದರು.
ಸಾಗರದ ಅಜಿತ ಸಭಾಭವನದಲ್ಲಿ ಶನಿವಾರ ಮೈಸೂರು ಗುಡಿಗಾರರ ಸಹಕಾರ ಸಂದ ಸರ್ವಸದಸ್ಯರ ಸಭೆಯಲ್ಲಿ ಹಿರಿಯ ಕುಶಲಕರ್ಮಿಗಳನ್ನು ಸನ್ಮಾನಿಸಿ ಮಾತನಾಡಿ, ನಾವು ತಯಾರಿಸಿದ ಕಲಾಕೃತಿಗಳಿಗೆ ಬೆಲೆ ಸಿಗುತ್ತಿಲ್ಲ. ನಮ್ಮ ಪರವಾಗಿ ಇರಬೇಕಾದ ಆಡಳಿತ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.
ಕುಶಲಕರ್ಮಿಗಳು ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ. ಮಕ್ಕಳಿಗೆ ಕರಕುಶಲ ಕಲೆ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳಿಗೆ ಬೇರೆ ಬೇರೆ ತರಬೇತಿ ಕೊಟ್ಟಂತೆ ಮನೆಯಲ್ಲಿ ಗುಡಿಗಾರಿಕೆ ಕಲೆ ಬಗ್ಗೆ ಸಹ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಶತಮಾನಗಳ ಹಿಂದೆ ಸಮಾಜದ ಪ್ರಮುಖರು ಗುಡಿಗಾರ ಸಮಾಜಕ್ಕೆ ಜಾಗ ಮಾಡಿರಿಸಿದ್ದಾರೆ. ಅನೇಕ ಕಾನೂನು ತೊಡಕು ಯಶಸ್ವಿಯಾಗಿ ಎದುರಿಸಿದ್ದೇವೆ. ಸೊಸೈಟಿ ಪಕ್ಕದ ಜಾಗ ನಗರಸಭೆ ಮಾಡಿದ ತಪ್ಪಿನಿಂದ ಪರಭಾರೆಯಾಗಿದೆ. ಅದನ್ನು ವಾಪಾಸ್​ ಸಂಸ್ಥೆಗೆ ಪಡೆಯಲು ಜಿಲ್ಲಾಧಿ-ಕಾರಿ ನ್ಯಾಯಾಲಯದಲ್ಲಿ ದಾವೆ ಹಾಕಲಾಗಿದೆ. ಸಂಸ್ಥೆಯ ಆಸ್ತಿ ರಣೆ ಮಾಡಲು ಎಲ್ಲ ರೀತಿಯ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ಕಾಶಿನಾಥ ಬಂಗಾರಪ್ಪ, ಸದಾನಂದ ವಜ್ರಪ್ಪಶೇಟ್​, ಜೆ.ಎ.ರಾಮದಾಸ, ಜಿ.ಉಮಾ ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಸ್​.ಆರ್​.ಪ್ರಭಾಕರ್​, ಜಿ.ಎಸ್​.ವಿನಾಯಕ, ಎಸ್​.ಎಂ.ನಾಗರಾಜ್​, ಎಸ್​.ಜಿ.ವಿನಾಯಕ್​, ನಾಗರಾಜ್​, ರಂಗನಾಥ ಗುಡಿಗಾರ, ಕೃಷ್ಣಮೂರ್ತಿ ಗುಡಿಗಾರ, ಟಿ.ಡಿ.ಶೇಷಾದ್ರಿ, ಸುಜಾತಾ, ಮೀನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net