ಪುರಾತನ ಕಾಲದಿಂದಲೂ ನೃತ್ಯ ಕಲೆಗಿದೆ ಮಾನ್ಯತೆ

ಸಾಗರದಲ್ಲಿ ನಾಟ್ಯತರಂಗ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹವನ್ನು ವ್ಯಾಸ ವಿಶ್ವವಿದ್ಯಾಲಯದ ಯೋಗ ಮತ್ತು ಮಾನವಿಕ ವಿಭಾಗದ ಮುಖ್ಯಸ್ಥೆ ಡಾ. ಕರುಣಾ ವಿಜಯೇಂದ್ರ ಉದ್ಘಾಟಿಸಿದರು. ಮೈತ್ರಿ ಪಾಟೀಲ್, ಆರ್.ಶ್ರೀನಿವಾಸ್, ಜನಾರ್ದನ ಮತ್ತಿತರರು ಇದ್ದರು.
ಸಾಗರದಲ್ಲಿ ನಾಟ್ಯತರಂಗ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹವನ್ನು ವ್ಯಾಸ ವಿಶ್ವವಿದ್ಯಾಲಯದ ಯೋಗ ಮತ್ತು ಮಾನವಿಕ ವಿಭಾಗದ ಮುಖ್ಯಸ್ಥೆ ಡಾ. ಕರುಣಾ ವಿಜಯೇಂದ್ರ ಉದ್ಘಾಟಿಸಿದರು. ಮೈತ್ರಿ ಪಾಟೀಲ್, ಆರ್.ಶ್ರೀನಿವಾಸ್, ಜನಾರ್ದನ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಾವಿದರಲ್ಲಿದೆ ನೆಲದ ಸಂಸ್ಕೃತಿ ಕಟ್ಟುವ ಮತ್ತು ಉಳಿಸುವ ಶಕ್ತಿ
  • ನಾಡಕಲಸಿಯ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ 96 ನೃತ್ಯ ಚಿತ್ರ
ಸಾಗರ: ನೆಲದ ಸಂಸ್ಕೃತಿ ಕಟ್ಟುವ ಮತ್ತು ಉಳಿಸುವ ಶಕ್ತಿ ಕಲಾವಿದರಲ್ಲಿದೆ ಎಂದು ವ್ಯಾಸ ವಿಶ್ವವಿದ್ಯಾಲಯದ ಯೋಗ ಮತ್ತು ಮಾನವಿಕ ವಿಭಾಗದ ಮುಖ್ಯಸ್ಥೆ ಡಾ. ಕರುಣಾ ವಿಜಯೇಂದ್ರ ಹೇಳಿದರು.
ನಗರದ ನಾಟ್ಯತರಂಗ ಸಂಸ್ಥೆ ನೃತ್ಯಭಾಸ್ಕರ ಸಭಾಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ 2025 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಾರಥಿ ಗೌರವ ಸ್ವೀಕರಿಸಿ ಮಾತನಾಡಿ, ಅಧ್ಯಯನಕ್ಕೆ ವಿಶೇಷ ಒತ್ತು ಕೊಟ್ಟ ಊರು ಸಾಗರ. 15 ವರ್ಷದ ಹಿಂದೆ ನಾಡಕಲಸಿಯ ಪುರಾತನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಿದಾಗ 96 ನೃತ್ಯಚಿತ್ರ ಇರುವುದನ್ನು ಪತ್ತೆಹಚ್ಚಿದ್ದೆ. ನಂತರ ಅಧ್ಯಯನ ನಡೆಸಿದೆ. 77ಕ್ಕೂ ಹೆಚ್ಚು ಚಿತ್ರ ಪ್ರಮುಖ ನೃತ್ಯ ಪ್ರಕಾರಕ್ಕೆ ಸಂಬಂಧಿಸಿದೆ. ಪುರಾತನ ಕಾಲದಲ್ಲಿ ನೃತ್ಯಕ್ಕೆ ಇರುವ ಮಾನ್ಯತೆಯನ್ನು ಚಿತ್ರಗಳು ತೋರಿಸುತ್ತವೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಮೈಸೂರು ಹೊರತುಪಡಿಸಿ ಹೆಚ್ಚಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಗರದಲ್ಲಿ ನಡೆಯುತ್ತಿವೆ. ನಾಟ್ಯತರಂಗ ಸಂಸ್ಥೆ ನಡೆಸುವ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹದಲ್ಲಿ ಹೆಸರಾಂತ ಕಲಾವಿದರು ಭಾಗವಹಿಸಿ ಕಲಾ ಪ್ರದರ್ಶನ ನೀಡುತ್ತಿರುವುದು ಸ್ಥಳೀಯ ಕಲಾವಿದರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಗಣಪತಿ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್, ಸಂಸ್ಥೆ ಮುಖ್ಯಸ್ಥ ನಾಟ್ಯಗುರು ವಿದ್ವಾನ್ ಜನಾರ್ದನ, ಸಮನ್ವಿತಾ, ಸಮುದ್ಯತಾ, ವರದಾ ಜನಾರ್ದನ, ಲಲಿತಾಂಬಿಕಾ ಇತರರಿದ್ದರು. ಗೌರಿ ಸಾಗರ್ ಮತ್ತು ಪೃಥ್ವಿ ಪಾರ್ಥಸಾರಥಿ ಅವರಿಂದ ಪಂಚತಂತ್ರ ಭರತನಾಟ್ಯ ನೃತ್ಯರೂಪಕ, ಡಾ. ಕರುಣಾ ವಿಜಯೇಂದ್ರ ನೃತ್ಯ ಸಂಯೋಜನೆಯಲ್ಲಿ ವಿದುಷಿ ಡಾ. ರಮ್ಯಾ ಸೂರಜ್ ಅವರಿಂದ ದುರ್ಗಾ ಸುಳಾದಿ ಪ್ರಸ್ತುತಿ ಸ್ವಗಾಯನ ಮತ್ತು ನರ್ತನ ಮತ್ತು ವಿದ್ಯಾಲಯದ ಮಕ್ಕಳಿಂದ ಭರತನಾಟ್ಯ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net