16ಕ್ಕೆ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ । Kannada Sahitya Parishad

ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಪಿ.ಶ್ರೀಕಾಂತ್.
ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಪಿ.ಶ್ರೀಕಾಂತ್.
Published on

ಪ್ರಮುಖ ಮುಖ್ಯಾಂಶಗಳು

  • ಸರ್ವಾಧ್ಯಕ್ಷರಾಗಿ ಬಿ.ಪಿ.ಶ್ರೀಕಾಂತ್, ಉದ್ಘಾಟನೆಗೆ ಅನುಷಾ ಹಿರೇಮಠ ಆಯ್ಕೆ
  • ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆಯೋಜನೆ
  • ಕನ್ನಡ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿಕೆ
ಶಿವಮೊಗ್ಗ: ಇಪ್ಪತ್ತೊಂದನೇ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ(Sahitya sammelana)ವನ್ನು ಜ.16ರಂದು ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಏರ್ಪಡಿಸಲಾಗಿದ್ದು, ಸರ್ವಾಧ್ಯಕ್ಷರಾಗಿ ಶಿವಮೊಗ್ಗದ ಜಾವಳ್ಳಿಯ ಜ್ಞಾನದೀಪ(Gnanadeepa) ಶಾಲಾ ವಿದ್ಯಾರ್ಥಿ ಬಿ.ಪಿ.ಶ್ರೀಕಾಂತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ತಿಳಿಸಿದ್ದಾರೆ.
ಉದ್ಘಾಟಕರಾಗಿ ಶಿಗ್ಗಾಂವ್‌(Shiggov)ನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಅನುಷಾ ಕರಿಬಸವಯ್ಯ ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಎಂ.ಅಪೇಕ್ಷಾ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ. ಹಿ.ಚಿ.ಬೋರಲಿಂಗಯ್ಯ, ದಾವಣಗೆರೆ ಡಿಐಜಿ ರವಿಕಾಂತೇಗೌಡ, ಬಾಲ ಪ್ರತಿಭೆಗಳಾದ ಮೈಸೂರಿನ ಡಾ. ಪೃಥು ಪಿ. ಅದ್ವೈತ್, ತರೀಕೆರೆಯ ಟಿ.ಜೆ.ಘಮನ್ ಮೂರ್ತಿ, ಸಣ್ಣಕೆರೆಯ ಅಕ್ಷರ ಎಸ್. ಶೆಟ್ಟಿ ಆಗಮಿಸುವರು ಎಂದಿದ್ದಾರೆ.
ಸಮ್ಮೇಳನದ ಕವಿಗೋಷ್ಠಿ(Kavighosti)ಯಲ್ಲಿ ಬೆಂಗಳೂರಿನ ಎನ್.ಸೃಜನಾ, ಶಿವಮೊಗ್ಗ ಗುರುಪುರದ ಎಂ.ಮಾನ್ವಿ, ಪ್ರಬಂಧ ಗೋಷ್ಠಿ(Essay Ghosti)ಗೆ ಮೈಸೂರಿನ ನಾದಶ್ರೀ ಆರ್. ಭಟ್ ಅಧ್ಯಕ್ಷತೆ ವಹಿಸುವರು. ಹಿಂದಿನ ರಾಜ್ಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ತೀರ್ಥಹಳ್ಳಿ ಮುದ್ದು ಕವಿಗೋಷ್ಠಿಗೆ, ಸಾಗರದ ಶ್ರಾವ್ಯ ಕಥೆಗೋಷ್ಠಿಗೆ, ಆನವಟ್ಟಿಯ ಭಾವನಾ ಆರ್. ಗೌಡ ಪ್ರಬಂಧ ಗೋಷ್ಠಿ ಸಮನ್ವಯಕಾರರಾಗಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.

ಶ್ರೀ ಪ್ರಸನ್ನನಾಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಭೆ

ಮಂಗಳವಾರ ಶಿವಮೊಗ್ಗದ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಮಠದ ಆಡಳಿತಾಧಿಕಾರಿ ಶಿವರಾಮ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ಭದ್ರಾವತಿ ತಾಲೂಕು ಅಧ್ಯಕ್ಷ ಎಚ್.ತಿಮ್ಮಪ್ಪ, ಮಹೇಶ್ ಗೌಡ ಸಭೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net