ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕುಸಿದು ಬಿದ್ದು ಸಾವು | Student death

ಮೃತಪಟ್ಟ ವಿದ್ಯಾರ್ಥಿ ಜೆ.ಕೆ.ವಿನಯ್.
ಮೃತಪಟ್ಟ ವಿದ್ಯಾರ್ಥಿ ಜೆ.ಕೆ.ವಿನಯ್.
Published on
ಶಿವಮೊಗ್ಗ: ತಾಲೂಕಿನ ತಮ್ಮಡಿಹಳ್ಳಿ ಪ್ರೌಢಶಾಲೆ(Thammadihalli High School)ಯಲ್ಲಿ ಸಹಪಾಠಿಗಳು ಚೆಸ್ ಆಡುತ್ತಿದ್ದುದನ್ನು ನೋಡುತ್ತಿದ್ದ ಕುಳಿತಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಜೆ.ಕೆ.ವಿನಯ್(15) ಮೃತಪಟ್ಟ ವಿದ್ಯಾರ್ಥಿ. ಶಾಲೆಯಲ್ಲಿ ಎಂದಿನಂತೆ ಇತರ ವಿದ್ಯಾರ್ಥಿಗಳು ಚೆಸ್ ಆಡುತ್ತಿದ್ದನ್ನು ನೋಡುತ್ತಾ ಕುಳಿತಿದ್ದ. ಈ ವೇಳೆ ಕುಸಿದು ಬಿದ್ದಿ ಆತನನ್ನು ತಕ್ಷಣವೇ ಶಿಕ್ಷಕರು ಆಯನೂರು ಸಮುದಾಯ ಆರೋಗ್ಯ ಕೇಂದ್ರ(Ayanur Community Health Center)ಕ್ಕೆ ಕರೆದೊಯ್ದಿದ್ದರು. 
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ(Meggan Hospital)ಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ವಿದ್ಯಾರ್ಥಿಯ ಹಠಾತ್ ಸಾವಿನಿಂದ ಶಾಲಾ ಶಿಕ್ಷಕರು, ಸಹಪಾಠಿಗಳು ಹಾಗೂ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದರು.
ವಿನಯ್ ಮೂಲತಃ ಶಿಕಾರಿಪುರದವನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ತಮ್ಮಡಿಹಳ್ಳಿಯ ಮಾವನ ಮನೆಯಲ್ಲಿದ್ದನು. ಓದಿನಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾರ್ಥಿ ಶಾಲೆಯಲ್ಲಿ ಸಾಮಾನ್ಯವಾಗಿಯೇ ಇದ್ದ ಎನ್ನಲಾಗಿದ್ದು, ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಮಗನ ಸಾವಿನ ಸುದ್ದಿ ತಿಳಿದು ಮೆಗ್ಗಾನ್ ಆಸ್ಪತ್ರೆಗೆ ಧಾವಿಸಿದ ತಂದೆ-ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆ(Kumsi Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net