ನಿತ್ಯಮನೆ ಸಂಗೀತ, ಅಲ್ಲಮ ರಂಗ, ವಚನ, ರೂಪಕ, ಉಪನ್ಯಾಸ, ಸಂವಾದ ಮತ್ತು ಆಶೀರ್ವಚನ ನಡೆಯಲಿದೆ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆ.13ರಂದು ಸಂಜೆ 6.30ಕ್ಕೆ ಬೆಕ್ಕಿನ ಕಲ್ಮಠ(Bekkina Kalmath)ದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ.ಧನಂಜಯ ಶ್ರಾವಣ ಚಿಂತನ ಉದ್ಘಾಟಿಸುವರು. ವಿದ್ಯುತ್ ಇಲಾಖೆಯ ನಿವೃತ್ತ ಅಧೀಕ್ಷಕ ಇಂಜಿನಿಯರ್ ಎಸ್.ಜಿ.ಶಶಿಧರ ಅಧ್ಯಕ್ಷತೆ ವಹಿಸುವರು. ಚಿಂತಕ ಡಾ. ರಾಜೇಂದ್ರ ಚೆನ್ನಿ ಪ್ರಧಾನ ಉಪನ್ಯಾಸ ನೀಡುವರು. ಡಿಡಿಪಿಐ ಎಸ್.ಆರ್.ಮಂಜುನಾಥ, ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಂ.ಆರ್.ಜಯದೇವಪ್ಪ, ಮೆಸ್ಕಾಂನ ಉಪ ಲೆಕ್ಕ ನಿಯಂತ್ರಣಾಧಿಕಾರಿ ಟಿ.ಇ.ಚಂದ್ರಕಲಾ, ಕೆಪಿಟಿಸಿಎಲ್ ನಿವೃತ್ತ ಲೆಕ್ಕಾಧಿಕಾರಿ ಎಸ್.ಪಿ.ಮೋಹನ್‌ಕುಮಾರ್ ಭಾಗವಹಿಸುವರು ಎಂದರು.