ಶ್ರೀ ವರ್ಧಮಾನ ಸ್ವಾಮಿ, ಕೂಷ್ಮಾಂಡಿನಿ ದೇವಿ ಹಾಗೂ ಪದ್ಮಾವತಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಅಷ್ಟ ವಿಧಾರ್ಚನೆ ಹಾಗೂ ಅಮ್ಮನವರಿಗೆ ಸಹಸ್ರನಾಮ ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು. ಪೂಜಾ ಕಾರ್ಯಗಳನ್ನು ಬಸದಿ ಪುರೋಹಿತರಾದ ಮೋಹನ್‌ಕುಮಾರ್ ಇಂದ್ರ, ವಿದ್ಯಾಧರ ಇಂದ್ರ, ಪದ್ಮರಾಜ ಇಂದ್ರ, ಆದರ್ಶ ಇಂದ್ರ ಮತ್ತು ಶ್ರೀಧರ ಇಂದ್ರ ನೆರವೇರಿಸಿದರು.