ಚೌಡೇಶ್ವರಿಗೆ ವಿಶೇಷ ಅಲಂಕಾರ

ಶ್ರಾವಣ ಮಾಸದ ನಿಮಿತ್ತ ಕಾರ್ಗಲ್ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಭಕ್ತರು ದರ್ಶನ ಪಡೆದರು.
ಶ್ರಾವಣ ಮಾಸದ ನಿಮಿತ್ತ ಕಾರ್ಗಲ್ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಭಕ್ತರು ದರ್ಶನ ಪಡೆದರು.
Published on
ಕಾರ್ಗಲ್: ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇಗುಲದಲ್ಲಿ ಶ್ರಾವಣ ಶುಕ್ರವಾರ ನಿಮಿತ್ತ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯ ಜರುಗಿದವು. ದೇವಸ್ಥಾನದಲ್ಲಿ ಬೆಳಗ್ಗೆ ಅಭಿಷೇಕ, ಅಲಂಕಾರ ಕುಂಕುಮಾರ್ಚನೆ ನೆರವೇರಿದವು.
ಮಹಿಳೆಯರು ಶ್ರಾವಣ ನಿಮಿತ್ತ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಗುಲಕ್ಕೆ ಆಗಮಿಸಿದ ಸಮಸ್ತ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ, ಕಾಯಿ, ಅಕ್ಕಿ, ರವಿಕೆ, ಹೂವು ಸೇರಿ ಉಡಿಯನ್ನು ದೇವಾಸ್ಥಾನದಿಂದ ನೀಡಲಾಯಿತು.
ಸೇವಾ ಕಾರ್ಯವನ್ನು ಮೋಹನ್ ಎಂ.ಪೈ ಕುಟುಂಬದವರು ನಡೆಸಿಕೊಟ್ಟರು. ಭಕ್ತರಿಗೆ ಪ್ರಸಾದ ನೀಡಲಾಯಿತು. ಅಜಿತ್ ಮಹಾಲೆ, ಶಿವಾನಂದ ಪ್ರಭು, ಪ್ರಹ್ಲಾದ್ ಎಂ.ಪೈ, ಸತೀಶ್ ಮಹಾಲೆ, ಪ್ರಕಾಶ್ ಭಟ್, ಪ್ರವೀಣ್ ಮಹಾಲೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net